ಸರ್ಕಾರಿ ಸವಲತ್ತು ಅರ್ಹರಿಗೆ ತಲುಪಿಸಿ: ಯೇಗೇಶ್ವರ್‌

| Published : Apr 21 2025, 01:00 AM IST

ಸರ್ಕಾರಿ ಸವಲತ್ತು ಅರ್ಹರಿಗೆ ತಲುಪಿಸಿ: ಯೇಗೇಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಹಾಗೂ ತಮ್ಮ ಇಲಾಖೆಯಿಂದ ಜನಸಾಮಾನ್ಯರಿಗೆ ಯಾವೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬುದನ್ನು ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಸರ್ಕಾರಿ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಹಾಗೂ ತಮ್ಮ ಇಲಾಖೆಯಿಂದ ಜನಸಾಮಾನ್ಯರಿಗೆ ಯಾವೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬುದನ್ನು ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಪಂ ಅವರಣದಲ್ಲಿ ಜಿಪಂ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳು(ಗ್ರಾಮೀಣ ಕೈಗಾರಿಕೆ) ಹಾಗೂ ಸುನೋದಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ಗಳ ಸಂಯುಕ್ತಾಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ, ಕುಶಲ ಕರ್ಮಿಗಳಿಗೆ ವಿವಿಧ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.

ಸರ್ಕಾರ ಗುಡಿ ಕೈಗಾರಿಕೆಗಳಿಗೆ, ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ, ಅವುಗಳು ಆಯಾಯಾ ಇಲಾಖೆಗಳು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿವೆ. ಇದರ ಮಧ್ಯದಲ್ಲಿ ಕೆಲ ಮಧ್ಯವರ್ತಿಗಳು ಅರ್ಹ ಫಲಾನುಭವಿಗಳನ್ನು ಬಿಟ್ಟು ತಮಗೆ ಬೇಕಾದವರಿಗೆ ಇಂತಹ ಯೋಜನೆಗಳನ್ನು ತಲುಪಿಸುವ ಮುಖೇನ ಜನಪರ ಯೋಜನೆಗಳ ಹೆಸರಿಗೆ ಕಳಂಕ ಉಂಟು ಮಾಡುತ್ತಾರೆ. ಆ ಬಗ್ಗೆ ನಿಗಾ ವಹಿಸುವಂತೆ ಕಿವಿ ಮಾತು ಹೇಳಿದರು.

ಇಂದು ಕುಶಲ ಕರ್ಮಿಗಳು, ನಿರುದ್ಯೋಗ ಮಹಿಳೆಯರು, ಸೇರಿದಂತೆ ಒಟ್ಟು ೧೯೩ ಮಂದಿಗೆ ಹಾಗೂ ಹೊಲಿಗೆ ತರಬೇತಿ ಪೂರ್ಣಗೊಳಿಸಿದ ೫೫ ಮಂದಿಗೆ ಯಂತ್ರೋಪಕರಣಗಳನ್ನು ವಿತರಿಸಿದ್ದು, ಇವುಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ಪಲಾನುಭವಿಗಳಿಗೆ ಸಲಹೆ ನೀಡಿದರು.

ಕಾರ್ಮಿಕ ಇಲಾಖೆಯ ಅಜಿತ್ ಕುಮಾರ್ ಸರಕಾರದ ನಿಯಮದಂತೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿ ಅದರಲ್ಲಿ ಆಯ್ಕೆಯಾದವರಿಗೆ ಉಪಕರಣಗಳನ್ನು ನೀಡಲಾಗುತ್ತಿದೆ. ಹೊಲಿಗೆ ಯಂತ್ರಗಳನ್ನು ಸಹ ಒಂದು ತಿಂಗಳುಗಳ ಕಾಲ ತರಬೇತಿ ಮುಗಿಸಿದ ಆರ್ಹರಿಗೆ ನೀಡುತ್ತಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಂಗನಾಥ್, ತಾಪಂ ಇಒ ಸಂದೀಪ್, ನಗರಸಭಾ ಸದಸ್ಯ ಸತೀಶ್ ಬಾಬು, ಫರೀದ್, ಸಿದ್ದರಾಮಯ್ಯ ಇತರರು ಹಾಜರಿದ್ದರು.