ಸರ್ಕಾರಿ ಯೋಜನೆಗಳು ಜನರಿಗೆ ತಲುಪಿಸಿ
KannadaprabhaNewsNetwork | Published : Oct 14 2023, 01:01 AM IST / Updated: Oct 14 2023, 01:02 AM IST
ಸರ್ಕಾರಿ ಯೋಜನೆಗಳು ಜನರಿಗೆ ತಲುಪಿಸಿ
ಸಾರಾಂಶ
ನೆಲಮಂಗಲ: ಸಿಎಸ್‌ಸಿ ಕೇಂದ್ರಗಳು ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸುತ್ತಿವೆ ಎಂದು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಇ )ರಾಜ್ಯ ವ್ಯವಸ್ಥಾಪಕ ಶೈಲೇಂದರ್ ತಿಳಿಸಿದರು.
ನೆಲಮಂಗಲ: ಸಿಎಸ್‌ಸಿ ಕೇಂದ್ರಗಳು ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸುತ್ತಿವೆ ಎಂದು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಇ )ರಾಜ್ಯ ವ್ಯವಸ್ಥಾಪಕ ಶೈಲೇಂದರ್ ತಿಳಿಸಿದರು. ನಗರದಲ್ಲಿ ಸಿಎಸ್ ಸಿವಿಎಲ್ ಇ ಟ್ರಸ್ಟ್ ಉದ್ಘಾಟನೆ ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಹಾಗೂ ಇ-ಶ್ರಮ ಯೋಜನೆಯ ಉಚಿತ ನೋಂದಣಿ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಿವೆ. ಗ್ರಾಮೀಣರಿಗೆ ಸರ್ಕಾರಿ ಮತ್ತು ಉದ್ಯಮ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತವೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಸುಮಾರು 25ಕ್ಕೂ ಹೆಚ್ಚು ಕುಶಲಕರ್ಮಿ ಸಮುದಾಯಗಳಿಗೆ ಉಚಿತ ಕೌಶಲ್ಯ ತರಬೇತಿ ನೀಡಿ 3 ಲಕ್ಷಕ್ಕೂ ಅಧಿಕ ಸಾಲ ಸೌಲಭ್ಯ ನೀಡುತ್ತಿದೆ ಎಂದರು. ತಾಲೂಕು ಕಾರ್ಮಿಕ ನಿರೀಕ್ಷಕ ದನಪಾಲ್ ನಾಯಕ್ ಮಾತನಾಡಿ, 50ಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ಇ-ಶ್ರಮ್ ಕಾರ್ಡ್ ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರು ನೋಂದಣಿ ಮಾಡಿಕೊಂಡು ವಿವಿಧ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಿಎಸ್ ಸಿವಿಎಲ್ ಇ ಟ್ರಸ್ಟ್ ಅಧ್ಯಕ್ಷೆ ವೀಣಾ, ಗೌರವಾಧ್ಯಕ್ಷ ಉಮಾಶಂಕರ್, ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ತ್ರಿವಿಕ್ರಂ, ಕಾರ್ಯದರ್ಶಿ ಬಿ.ಎಸ್.ರಾಘವೇಂದ್ರಚಾರ್, ಜಂಟಿ ಕಾರ್ಯದರ್ಶಿ ಬಿ.ಎನ್.ಪ್ರದೀಪ್, ಸಂಚಾಲಕ ಜಿ.ಆರ್.ಕೃಷ್ಣಮೂರ್ತಿ, ಸಹ ಸಂಚಾಲಕ ಎಸ್.ಚಂದನ್, ಸಂಘಟನಾ ಕಾರ್ಯದರ್ಶಿ ಜಿ.ಎಚ್.ರಾಜು, ಸಹ ಸಂಘಟನಾ ಕಾರ್ಯದರ್ಶಿ ಪಿ.ಮುರಳಿಕೃಷ್ಣ, ಮಾಧ್ಯಮ ವಕ್ತಾರ ಡಿ.ಆರ್.ಅಭಿಷೇಕ್, ಖಜಾಂಚಿ ಎನ್.ರಘು, ಕಾನೂನು ಸಲಹೆಗಾರ ಬಿ.ಕೆ.ಮಹೇಶ್, ಸದಸ್ಯ ವಿರೇಶ್, ಎಂ.ಚಂದನ್, ಜಿ.ಎಸ್.ಯೋಗೇಶ್, ಜಿ.ಎಂ.ಮಹೇಶ್ ಮತ್ತಿತರರು ಉಪಸ್ಥಿತರಿದರು. ಪೊಟೊ-13 ಕೆ ಎನ್ ಎಲ್ ಎಮ್ 1- ನೆಲಮಂಗಲದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಹಾಗೂ ಇ-ಶ್ರಮ ಯೋಜನೆಯ ಉಚಿತ ನೋಂದಣಿ ಕಾರ್ಯಕ್ರಮವನ್ನು ರಾಜ್ಯ ವ್ಯವಸ್ಥಾಪಕ ಶೈಲೇಂದರ್ ಉದ್ಘಾಟಿಸಿದರು.