ಪ್ರತಿ ತಿಂಗಳು ಎರಡನೇ ತಾರೀಖು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅದಾಲತ್ ನಡೆಸುತ್ತೇವೆ ಸಾರ್ವಜನಿಕರು ತಮ್ಮ ಸಮಸ್ಯೆ ಮತ್ತು ದೂರುಗಳನ್ನು ಸಲ್ಲಿಸಬಹುದು, ಕರೆಮಾಡಿ ಮಾಹಿತಿ ನೀಡಬಹುದು. ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ನಿಗಮದ ಬಸ್‌ಗಳಲ್ಲಿ ೫೦೦ ಕೋಟಿ ಟ್ರಿಪ್ ಫಲಾನುಭವಿಗಳು ಪ್ರಯಾಣಿಸಿದ್ದಾರೆ,
ಕನ್ನಡಪ್ರಭ ವಾರ್ತೆ ಕೋಲಾರ
ಪಂಚ ಗ್ಯಾರಂಟಿಗಳ ಪೂರ್ಣ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆಗಳು ಕಾರ್ಯೋನ್ಮುಖವಾಗಬೇಕು. ಅಲ್ಲದೆ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ಕಾಲಕಾಲಕ್ಕೆ ತಲುಪಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎನ್.ಎಂ.ಹೆಗಡೆ ತಿಳಿಸಿದರು.ನಗರದ ಜಿಪಂ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ತಿಂಗಳು ಎರಡನೇ ತಾರೀಖು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅದಾಲತ್ ನಡೆಸುತ್ತೇವೆ ಸಾರ್ವಜನಿಕರು ತಮ್ಮ ಸಮಸ್ಯೆ ಮತ್ತು ದೂರುಗಳನ್ನು ಸಲ್ಲಿಸಬಹುದು ಅಥವಾ ೧೯೬೭ಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ೬೦೦ ನ್ಯಾಯ ಬೆಲೆ ಅಂಗಡಿಗಳಿದ್ದು, ಒಟ್ಟು ೩೮,೩೦,೮೬ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ ಆನ್ ಲೈನ್ ಮೂಲಕ ಬಿಪಿಎಲ್ ಹೊಸ ಪಡಿತರ ಚೀಟಿಗಳನ್ನು ಕೋರಿ ೧೮೨೦೫ ಅರ್ಜಿಗಳು ಸಲ್ಲಿಸಿದ್ದು, ಈ ಪೈಕಿ ೧೪೭೭೩ ವಿಲೇ ಮಾಡಲಾಗಿದೆ ಎಂದು ತಿಳಿಸಿದರು.ಗೃಹಲಕ್ಷ್ಮೀ ಯೋಜನೆಯಲ್ಲಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳ ೨೦೦೦ ಸಾವಿರ ರೂಗಳಂತೆ ಡಿಬಿಟಿ ಮೂಲಕ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಈ ಯೋಜನೆ ಶೇ ೯೫.೮೨ ಸಾಧನೆಯಾಗಿದೆ ಎಂದರು.
ಶಕ್ತಿ ಯೋಜನೆ ಸಾಧನೆಶಕ್ತಿ ಯೋಜನೆ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ನಿಗಮದ ಬಸ್‌ಗಳಲ್ಲಿ ೫೦೦ ಕೋಟಿ ಟ್ರಿಪ್ ಫಲಾನುಭವಿಗಳು ಪ್ರಯಾಣಿಸಿದ್ದಾರೆ, ಅಲ್ಲದೆ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿಯಲ್ಲಿ ಅರ್ಹತೆಯುಳ್ಳ ಒಟ್ಟು ಸ್ಥಾವರಗಳು ಸಂಖ್ಯೆ ೪,೧೭,೨೮೪ ನೋಂದಣಿಯಾಗಿದೆ ಎಂದು ತಿಳಿಸಿದರು.
ಯುವ ನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ೩,೭೭೭ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಯೋಜನೆ ಪ್ರಾರಂಭದಿಂದ ಸದ್ಯದವರೆಗೆ ಒಟ್ಟು ೧೨,೭೬,೩೭,೦೦೦ ರೂಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.ಜಿಪಂ ಸಿಇಓ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಉಪಾಧ್ಯಕ್ಷರು ಹಿದಾಯತ್‌ವುಲ್ಲಾ, ನಾಗೇಶ್ವರಿ, ಎಸ್.ಉಮಾದೇವಿ, ಉಪ ಕಾರ್ಯದರ್ಶಿ ಟಿ.ಕೆ.ರಮೇಶ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ರಾಧಾಕೃ? ರೆಡ್ಡಿ, ಬಂಗಾರಪೇಟೆ ಅಧ್ಯಕ್ಷ ಪಾರ್ಥಸಾರಥಿ, ಕೋಲಾರ ತಾಲ್ಲೂಕು ಅಧ್ಯಕ್ಷ ಎಂ.ವಿ.ಮುನಿಯಪ್ಪ, ಸದಸ್ಯರಾದ ಮಮತ ರೆಡ್ಡಿ, ಮೊಹಮ್ಮದ್ ಮುನೀರ್ ಇದ್ದರು.