ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೇವಲ ಸಂಶೋಧನೆಗಳನ್ನು ನಡೆಸುವುದಲ್ಲದೇ ಸಂಶೋಧನೆಯ ಪ್ರತಿಫಲವನ್ನು ರೈತರಿಗೆ ಮುಟ್ಟಿಸುವಂತಹ ಕೆಲಸವನ್ನು ವಿಶ್ವವಿದ್ಯಾಲಯ ಮಾಡಬೇಕೆಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಕೆ.ನಾಯ್ಕ ಹೇಳಿದರು.ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಸಂಸ್ಥಾಪನಾ ದಿನ ಮತ್ತು ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತ್ವರಿತ ಪ್ರಗತಿಯ ಕುರಿತು ಮತ್ತು ಕರ್ನಾಟಕದ ರೈತರಿಗೆ ಸಮರ್ಪಕ ಸಲಹೆ-ಸೂಚನೆಗಳನ್ನು ನೀಡುತ್ತಾ ಬಂದಿದೆ. ರೈತರಿಗೆ ಸಾಕಷ್ಟು ಮಾರ್ಗದರ್ಶನ ನೀಡಿ ರೈತರ ಏಳಿಗೆಗೆ ಶ್ರಮಿಸುತ್ತಿದೆ ಎಂದರು.
ಕಳೆದ 6 ವರ್ಷಗಳಿಂದ ಜೆ.ಆರ್.ಎಫ್ ಮತ್ತು ಎಸ್.ಆರ್.ಎಫ್‌ದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ ಜೊತೆಗೆ ಭವಿಷ್ಯದಲ್ಲಿ ಒಳ್ಳೆಯ ಗುರಿ ಇಟ್ಟು ಅದನ್ನು ಸಾಧಿಸಲು ಸಹಕರಿಸುತ್ತಿರುವ ವಿಶ್ವವಿದ್ಯಾಲಯವು ದೇಶಾದ್ಯಂತ ಹೆಸರುವಾಸಿಯಾಗಲೆಂದು ಹಾರೈಸಿದರು. ಕರ್ನಾಟಕವು ಉತ್ತಮವಾದ ಮಣ್ಣು ಹೊಂದಿರುವ ರಾಜ್ಯವಾಗಿದೆ. ಇದರಲ್ಲಿ ಉತ್ತಮವಾದ ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣುಗಳನ್ನು ಬೆಳೆದು ರೈತರು ತಮ್ಮ ಆದಾಯವನ್ನು ಮಾತ್ರವಲ್ಲದೇ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಹ ಮೇಲೆತ್ತುವಲ್ಲಿ ಸಹಕರಿಸಬೇಕೆಂದು ಮತ್ತು ಆಹಾರ ಭದ್ರತೆ ನೀಡುತ್ತಿರುವ ರೈತರಿಗೆ ನಮನ ಸಲ್ಲಿಸಿದರು.ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ತೋ.ವಿ.ವಿ. ಬಾಗಲಕೋಟೆಯು ವಾಣಿಜ್ಯ ಮತ್ತು ಉನ್ನತ ಪೋಷಕಾಂಶಗಳನ್ನೊಳಗೊಂಡ ಬೆಳೆಗಳ ಕುರಿತು ಸಂಶೋಧನೆ ನಡೆಸುತ್ತಿರುವ ಏಕೈಕ ವಿಶ್ವವಿದ್ಯಾಲಯವಾಗಿದೆ. ತೋಟಗಾರಿಕೆ ಬೆಳೆಗಳು ರೈತರಿಗೆ ಆದಾಯ ಸುಸ್ಥಿರತೆ, ಪೋಷಕಾಂಶಗಳು ಮತ್ತು ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ. ಈ ವಿಶ್ವವಿದ್ಯಾಲಯದಿಂದ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕು. ರೈತರಿಗೆ ಸಹಾಯಕವಾಗುವಂತಹ ತಾಂತ್ರಿಕತೆಗಳು ಅಭಿವೃದ್ಧಿಯಾಗಬೇಕು ಎಂದು ತಿಳಿಸಿದರು. ರೈತ ಸದಾಶಿವ ಭಂಗಿ ಮಾತನಾಡಿ, ಮೊದಮೊದಲು ವಿಶ್ವವಿದ್ಯಾಲಯವು ಎಲ್ಲಿದೆ ಎಂದು ಜನಸಾಮಾನ್ಯರಿಗೆ ತಿಳಿದಿರಲಿಲ್ಲ. ಈಗಿನ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯವು ಉನ್ನತಸ್ಥಾನದಲ್ಲಿ ಮುಂದುವರಿಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು. ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸೋಣವೆಂದು ಕರೆ ನೀಡಿದರು.ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿ ಡಾ.ಎನ್.ಕೆ.ಹೆಗಡೆ, ಡಾ.ಟಿ.ಬಿ.ಅಳ್ಳೊಳ್ಳಿ, ಡಾ.ಮಹೇಶ್ವರಪ್ಪ ಎಚ್.ಪಿ., ಡಾ. ಲಕ್ಷ್ಮೀನಾರಾಯಣ ಹೆಗಡೆ, ವಿಸ್ತರಣಾ ನಿರ್ದೇಶಕರು, ಡಾ. ರವೀಂದ್ರ ಮುಳಗೆ, ಡಾ. ರಾಮಚಂದ್ರ ನಾಯಕ, ಪಿ.ಬಿ.ಹಳೇಮನಿ,ಶಾಂತಾ ಕಡಿ ವಿಜಯಭಾಸ್ಕರ ಭಜಂತ್ರಿ, ಆಸ್ತಿ ಅಧಿಕಾರಿಗಳು ಹಾಗೂ ಎಲ್ಲ ಮಹಾವಿದ್ಯಾಲಯದ ಡೀನ್‌ಗಳು, ಎಲ್ಲ ಶಿಕ್ಷಕ/ಶಿಕ್ಷಕೇತರ ಹಾಗೂ ಕಾರ್ಮಿಕ ಬಂಧುಗಳು ಭಾಗವಹಿಸಿದ್ದರು.
ಡಾ.ಲಕ್ಷ್ಮೀನಾರಾಯಣ ಹೆಗಡೆ ವಂದಿಸಿದರು. ಡಾ. ಸಂಜೀವರೆಡ್ಡಿ ರೆಡ್ಡಿ ಮತ್ತು ಡಾ.ಸರ್ವಮಣಗಲಾ ಜೋಳಿನ ನಿರೂಪಿಸಿದರು.---ಕೋಟ್‌ಸ್ವಚ್ಛೆಯಿಂದ ಎಲ್ಲರೂ ಪ್ರಾಮಾಣಿಕ ಹಾಗೂ ಪರಿಶ್ರಮದಿಂದ ದುಡಿದರೆ ಕೇವಲ 10 ವರ್ಷಗಳಲ್ಲಿ ಸರ್ಕಾರದ ಜಿ.ಡಿ.ಪಿ.ಯನ್ನು ದ್ವಿಗುಣಗೊಳಿಸಲು ಸಾಧ್ಯ.-ಡಾ.ಎಂ.ಕೆ.ನಾಯ್ಕ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ