ಸಾರಾಂಶ
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಅಕ್ರಮವಾಗಿ ಹಣ ತೆಗೆದಿದ್ದು, ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಮಾಜ ಸೇವಕ ಹಣಮಂತ ಭಿರಡೆ ಮಂಗಳವಾರ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಅಕ್ರಮವಾಗಿ ಹಣ ತೆಗೆದಿದ್ದು, ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಮಾಜ ಸೇವಕ ಹಣಮಂತ ಭಿರಡೆ ಮಂಗಳವಾರ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.ರಾಯಭಾಗ ಗ್ರಾಮೀಣ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಲ್ಲಿ ಅಕ್ರಮವಾಗಿ ಹಣ ತೆಗೆಯಲಾಗಿದೆ. 11/06/2024 ರಂದು ಫೋಟೋ ಮೇಲೆ ಫೋಟೋ ಹಾಕಿ ಕಾಮಗಾರಿಗಳ ಮಾಡಲಾಗಿದೆ. 08/06/2024 ರಂದು ಸಂತೂಬಾಯಿ ದೇವಸ್ಥಾನದ ಹತ್ತಿರ ಕಾಮಗಾರಿ ಮಾಡದೇ ಕೂಲಿಗಳನ್ನು ನಿಲ್ಲಿಸಿ ಫೋಟೋ ಹೊಡೆದು ಅಪಲೋಡ್ ಮಾಡಿ ಹಣ ತೆಗೆಯಲಾಗಿದೆ. ಅದೇ ರೀತಿ ಸಂತೂಬಾಯಿ ದೇವಸ್ಥಾನದ ಹತ್ತಿರ 11/06/2024 ರಂದು ಮಹಿಳಾ ಕೂಲಿಗಳನ್ನು ನಿಲ್ಲಿಸಿ ಫೋಟೋ ಹೊಡೆದು ಅಪಲೋಡ್ ಮಾಡಿ ಹಣ ತೆಗೆಯಲಾಗಿದೆ. ಅದೇ ರೀತಿ ಬೈರಯೊಡಿಯಲ್ಲಿ ಗುರುಲಿಂಗ ಪೂಜೇರಿಯವರ ಮನೆ ಮುಂದೆ ಕಾಮಗಾರಿ ಮಾಡದೇ ಕಾಮಗಾರಿ ಆಗಿದೆ ಎಂದು 26-05- 2024 ರಂದು ಹಣ ತೆಗೆಯಲಾಗಿದೆ. 11/06/2024 ರಂದು ಆನೆಬಾಯಿ ಖೋಡಿ ಹತ್ತಿರ ಗಣಪತಿ ಹವಾಲ್ದಾರ ಮನೆಯ ಮುಂದೆ ಸುಮ್ಮನೆ ನಿಂತು ಫೋಟೋ ಹಾಕಿ ಹಣ ತೆಗೆದಿದ್ದಾರೆ. ಆದ್ದರಿಂದ ದಾಖಲಾತಿಗಳನ್ನು ಗಮನಿಸಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.