ಸಾರಾಂಶ
ಶಹಾಪುರ ನಗರಸಭೆಯ ಪೌರ ಕಾರ್ಮಿಕರ ಮೇಲೆ ಮೇಲಧಿಕಾರಿಗಳು ದೌರ್ಜನ್ಯವೆಸಗಿ, ಇಬ್ಬರು ಕಾರ್ಮಿಕ ಮುಖಂಡರನ್ನು ಬೇರಡೆ ನಿಯೋಜನೆ ಮಾಡಿದ್ದಾರೆಂದು ಆರೋಪಿಸಿದ ಕಟ್ಟಡ ಕಾರ್ಮಿಕರ ಸಂಘವು, ಪೌರಾಯುಕ್ತರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ನಗರದಲ್ಲಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಪತ್ರ ಸಲ್ಲಿಸಿತು.
ಇಬ್ಬರು ಕಾರ್ಮಿಕ ಮುಖಂಡರ ನಿಯೋಜನೆ ಖಂಡಿಸಿ ಮನವಿ ಕನ್ನಡಪ್ರಭ ವಾರ್ತೆ ಶಹಾಪುರ
ನಗರಸಭೆಯ ಪೌರ ಕಾರ್ಮಿಕರ ಮೇಲೆ ಮೇಲಧಿಕಾರಿಗಳು ದೌರ್ಜನ್ಯವೆಸಗಿ, ಇಬ್ಬರು ಕಾರ್ಮಿಕ ಮುಖಂಡರನ್ನು ಬೇರಡೆ ನಿಯೋಜನೆ ಮಾಡಿದ್ದಾರೆಂದು ಆರೋಪಿಸಿದ ಕಟ್ಟಡ ಕಾರ್ಮಿಕರ ಸಂಘವು, ಪೌರಾಯುಕ್ತರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ನಗರದಲ್ಲಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಪತ್ರ ಸಲ್ಲಿಸಿತು.ಬಡ ಕಾರ್ಮಿಕರಿಗೆ ಕಳೆದ 10 ತಿಂಗಳಿಂದ ವೇತನವು ಆಗಿರುವುದಿಲ್ಲ. ಇಪಿಎಫ್, ಇಎಸ್‌ಐ ಕಾರ್ಡ್ ಮಾಡಿಸಲು ವೇತನದಲ್ಲಿ ಕಡಿತಗೊಂಡ ಹಣ ಎಲ್ಲಿದೆ ತೋರಿಸಿ ಎಂದರೆ ಕಾರ್ಮಿಕ ಸಂಘದ ಅಧ್ಯಕ್ಷ ಶರಣು ನರಬೋಳಿ ಹಾಗೂ ಪ್ರಧಾನ ಕಾರ್ಯದರ್ಶಿ ಹಣಮಂತ ಯಾದವ್ ಅವರನ್ನು ಬೇರಡೆ ನಿಯೋಜನೆ ಮಾಡಿರುವುದು ನೋಡಿದರೆ, ಕಾರ್ಮಿಕರ ಹಣ ಲಪಟಾಯಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಈ ಕೂಡಲೇ ನಗರಸಭೆ ಕಾರ್ಮಿಕರ ಬೇಡಿಕೆ ಈಡೇರಿಸಬೇಕು. ಕಾರ್ಮಿಕರಿಗೆ ಬೆದರಿಕೆ ಒಡ್ಡುತ್ತಿರುವ ಪೌರಾಯುಕ್ತರು ಹಾಗೂ ಪರಿಸರ ಅಭಿಯಂತರರ ವಿರುದ್ಧ ಕೂಡಲೇ ಶಿಸ್ತು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಳೆದ ಎಂಟು ತಿಂಗಳಿಂದ ನ್ಯಾಯಯುತ ಬೇಡಿಕೆ ಕೇಳಿದರೂ ಮನವಿ ಮಾಡಿದರೂ, ಅಲ್ಲದೆ ಅ.21 ರಂದು ಪ್ರತಿಭಟನೆ ನಡೆಸಿದರೂ ಇದುವರೆಗೂ ಕಾರ್ಮಿಕರ ಇಪಿಎಫ್, ಇಎಸೈ ಕಾರ್ಡ್ ಮಾಡಿಸುವ ವ್ಯವಧಾನ ಕೈಗೊಂಡಿರುವದಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ನಗರಸಭೆಗೆ ಆಗಮಿಸಿ ಸಮಗ್ರ ಪರಿಶೀಲನೆ ನಡೆಸಿ ಮೇಲಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.ಸಂಘದ ಅಧ್ಯಕ್ಷ ಪ್ರದೀಪ ಅಣಬಿ, ಅಂಬ್ರೇಶ ಶಿರವಾಳ, ಭೋಜಪ್ಪ ಮುಂಡಾಸ, ಶರಣು ದಿಗ್ಗಿ, ಶರಣಯ್ಯ ರಾಕಂಗೇರಿ, ಪ್ರಕಾಶ ದಿಗ್ಗಿ ಇತರರಿದ್ದರು.