ಸಾರಾಂಶ
ದಾಬಸ್‍ಪೇಟೆ: ಸಮಾಜದಲ್ಲಿ ಅಶಾಂತಿ ಹಾಗೂ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುವುದಲ್ಲದೆ, ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ವ್ಯಕ್ತಿಯ ವಿರುದ್ದ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಶಿವಗಂಗೆಯ ಶಾರದಾ ವೃತ್ತದಲ್ಲಿ ಪ್ರತಿಭಟಿಸಿ ಡಿವೈಎಸ್ಪಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸೋಂಪುರ ಹೋಬಳಿ ಕಾಂಗ್ರೆಸ್ ಮುಖಂಡ ಗೋವಿಂದರಾಜು ಮಾತನಾಡಿ, ತಾಲೂಕಿನಲ್ಲಿ ಜನರ ಶಾಂತಿಯನ್ನು ಕದಡಲು ಕೆಲವರು ಮುಂದಾಗುತ್ತಿದ್ದಾರೆ. ರೈತರ ಬೆಳೆಗಳಿಗೆ ಪರಿಹಾರ ಬರದಂತೆ ವಿರೋಧ ಮಾಡಿ ರೈತರ ಬದುಕು ನಾಶ ಮಾಡಲು ಹೊರಟಿರುವ ಜಗದೀಶ್ ಚೌಧರಿ ಸಲ್ಲದ ಆರೋಪಗಳನ್ನು ಹೊರಸುತ್ತ ಜನರಲ್ಲಿ ತಪ್ಪು ಕಲ್ಪನೆ ಬಿತ್ತುತ್ತಿದ್ದಾರೆ. ನಾನು ಪಕ್ಷಾತೀತವಾಗಿ ಸ್ಥಳೀಯರಿಗೆ ಕೆಲಸ ನೀಡಿದ್ದೇನೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಜಗದೀಶ್ ಚೌದರಿ ಹಾಗೂ ಸಹಚರರ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ನಾನು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಲೇಔಟ್, ಅಕ್ರಮ ಮರಳುದಂಧೆ ಸೇರಿದಂತೆ ಕಾನೂನು ಬಾಹಿರ ಕೆಲಸಗಳು ಮಾಡಿದ್ದರೆ ಸಾಕ್ಷಿ ನೀಡಿ ನ್ಯಾಯಯುತವಾಗಿ ಹೋರಾಡಲಿ. ಅದನ್ನು ಬಿಟ್ಟು ನಮ್ಮ ಪಕ್ಷದ ಕಾರ್ಯಕರ್ತರು ಮಾಡುವ ಖಾಸಗಿ ಕೆಲಸಕ್ಕೆ ಅಡ್ಡಿಪಡಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕುವುದು ಸರಿಯಲ್ಲ. ಈಗಾಗಲೇ ಜಗದೀಶ್ ಚೌಧರಿ ಮೇಲೆ 15ಕ್ಕೂ ಹೆಚ್ಚು ಪ್ರಕರಣಗಳಿದ್ದು, ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಗೊಟ್ಟಿಗೆರೆ ನಾರಾಯಣ್ ಮಾತನಾಡಿ, ಒಂದು ಜೆಸಿಪಿ ಇರುವವರಿಗೆ ಖಾಸಗಿ ಕಂಪನಿಗಳು ಕೆಲಸ ಮಾಡಲು ಪಿಒ ನೀಡಲು ಸಾಧ್ಯವೇ? ಇಷ್ಟು ವರ್ಷಗಳು ನೀವು ಮಾಡಿದಾಗ ಯಾರಾದರೂ ಪ್ರಶ್ನೆ ಮಾಡಿದ್ದಾರೆಯೇ, ಈಗ ಗೋವಿಂದರಾಜು ಪಿಒ ಪಡೆದಿದ್ದಾರೆ ಅಂತ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದು ಸರಿಯಲ್ಲ. ಈ ಸಣ್ಣ ವಿಚಾರಕ್ಕೆ ಶಾಸಕರನ್ನು ಎಳೆದು ತರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಯುವ ಮುಖಂಡ ದೀಪಕ್ ಗೌಡ ಮಾತನಾಡಿ, ನಮ್ಮ ಹೋರಾಟ ಬಿಜೆಪಿ ಪಕ್ಷದ ವಿರುದ್ದವಲ್ಲ, ಅಲ್ಲಿರುವ ಜಗದೀಶ್ ಚೌದರಿ ಎಂಬ ವ್ಯಕ್ತಿ ವಿರುದ್ಧ. ಆತನ ಅಕ್ರಮಗಳನ್ನು ಪೊಲೀಸ್ ಇಲಾಖೆ ಕ್ರಮವಹಿಸದೇ ಏಕೆ ಸುಮ್ಮನಿದೆ ಎಂಬುದೇ ತಿಳಿಯುತ್ತಿಲ್ಲ, 25ಕ್ಕೂ ಹೆಚ್ಚು ಪ್ರಕರಣಗಳಿರುವ ವ್ಯಕ್ತಿ ಸಮಾಜದಲ್ಲಿ ಎದುರಾಗಿರುವ ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿ ಅಶಾಂತಿ ಸೃಷ್ಟಿಸುತ್ತಿದ್ದಾನೆ. ಪತ್ರಕರ್ತರ ಮೇಲೂ ಈತ ದೌರ್ಜನ್ಯ ಮಾಡಿರುವ ಉದಾಹರಣೆಗಳಿದ್ದು, ಸಮಾಜ ಹೊಡೆಯುವ ಹುನ್ನಾರ ಮಾಡುತ್ತಿರುವ ಈತನ ಮೇಲೆ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು. ಎನ್‍ಪಿಎ ಸದಸ್ಯರಾದ ಅಂಚೆಮನೆ ಪ್ರಕಾಶ್, ಗ್ರಾಪಂ ಅಧ್ಯಕ್ಷ ರಾಮಾಂಜಿನೇಯ, ಮಾಜಿ ಅಧ್ಯಕ್ಷರಾದ ಶಿವಕುಮಾರ್, ನಾರಾಯಣ್, ಗಂಗರುದ್ರಯ್ಯ, ಲೋಕೇಶ್, ಜಿ.ಮೂರ್ತಿ, ದಿನೇಶ್ ನಾಯಕ್, ಮನೋಹರ್, ಹನುಮಂತರಾಜು, ಸುರೇಶ್, ಡಿಎಸ್‍ಎಸ್ ಮುಖಂಡ ವೀರಣ್ಣ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನಮ್ಮ, ಬಿನ್ನಮಂಗಲ ವೆಂಕಟೇಶ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸಾಧಿಕ್ ಪಾಷ, ಗ್ರಾಪಂ ಸದಸ್ಯರಾದ ಅಶೋಕ್, ಶೋಭಾ, ಮುಖಂಡರಾದ ಬೀರಗೊಂಡನಹಳ್ಳಿ ಮಲ್ಲೇಶ್, ಕೆಡಿಪಿ ಸದಸ್ಯ ನಾರಾಯಣಗೌಡ, ಖಲಿಂಉಲ್ಲಾ, ಲಕ್ಕೂರು ಸಿದ್ದರಾಜು, ನಯಾಜ್ ಖಾನ್, ಮನು ಪ್ರಸಾದ್, ನಾರಾಯಾಣ್, ಮನೋಹರ್, ಯೋಗನಂದೀಶ್, ಟಗರು ಶಿವು ಇತರರು ಉಪಸ್ಥಿತರಿದ್ದರು.
(ಒಂದು ಫೋಟೋ ಮಾತ್ರ ಬಳಸಿ)ಪೋಟೋ 5 :
ಶಿವಗಂಗೆಯ ಶಾರದಾ ಕ್ರಾಸ್ ನಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಗದೀಶ್ ಚೌಧರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.;Resize=(128,128))
;Resize=(128,128))
;Resize=(128,128))