ಹಾವೇರಿ: ತಾಲೂಕಿನ ಹಲವಾರು ಹಳ್ಳಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದ್ದು, ಕೂಡಲೇ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮೀಣ ಭಾಗದ ಮಹಿಳೆಯರು ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದ ಜಿಲ್ಲಾ ನಿಯಂತ್ರಾಣಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ವರದಾಹಳ್ಳಿ, ನಾಗನೂರ, ಬೆನಕನಹಳ್ಳಿ, ತಿಮ್ಮಾಪೂರ, ಬೂದಗಟ್ಟಿ, ಮಾಚಾಪೂರ, ತಿಮ್ಮೆನಹಳ್ಳಿ, ತಿಮ್ಮಾಪೂರ ತಾಂಡಾ, ಹೊಂಬರಡಿ, ಕಂಚಾರಗಟ್ಟಿ, ಭೂವೀರಾಪೂರ, ಹೊಸಕಿತ್ತೂರ, ಅಕ್ಕೂರು, ಟಾಟಾಮಣ್ಣೂರು, ಕುಳೇನೂರ ಹಾಗೂ ಕೆರಿಮತ್ತಿಹಳ್ಳಿ ಗ್ರಾಮಗಳ ಮಹಿಳೆಯರು ಬಸ್ ಸೌಲಭ್ಯ ಕಲ್ಪಿಸುವಂತೆ ಹಾಗೂ ವೇಳೆಗೆ ಸರಿಯಾಗಿ ಬಸ್ ಬಿಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಹಳ್ಳಿಗಳಿಂದ ಹಾವೇರಿ ನಗರಕ್ಕೆ ಬರಲು ಬಸ್ ಸೌಲಭ್ಯಕ್ಕಾಗಿ ಪ್ರತಿದಿನ 3ರಿಂದ 5 ಕಿಲೋ ಮೀಟರ್ ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ಇದೆ. ಈ ಹಳ್ಳಿಗಳ ಜನರು ದಿನನಿತ್ಯದ ಕೆಲಸಗಳಿಗಾಗಿ ಹಾವೇರಿಗೆ ಓಡಾಡಲು ಸರ್ಕಾರಿ ಬಸ್ ಸೌಲಭ್ಯ ಇಲ್ಲದ ಕಾರಣ ನಡೆದುಕೊಂಡು ಹೋಗುವಂತಾಗಿದೆ. ಆದ್ದರಿಂದ ಮೇಲ್ಕಂಡ ಈ ಹಳ್ಳಿಗಳಿಗೆ ಕಾಯಂ ಆಗಿ ನಿರಂತರ ಬಸ್ ಸೌಲಭ್ಯ ಕಲ್ಪಿಸಲು ಮನವಿ ಮಾಡಿದರು.ಮನವಿ ಸ್ವೀಕರಿಸಿದ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಬಜ್ ಇಂಡಿಯಾ ಟ್ರಸ್ಟ್ ವ್ಯವಸ್ಥಾಪಕರಾದ ರುದ್ರೇಶ್, ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಅರುಣ ನಾಗಾವತ್, ಬಜ್ ಸಂಸ್ಥೆ ತರಬೇತಿದಾರ ದರ್ಶನ, ಅರ್ಚನಾ ದೇವತಿ, ರೇಣುಕಾ ಕಹಾರ, ಬಜ್ ಗೆಳತಿಯಾರದ ದೀಪಾ ಜಾಡರ, ಲÃ ಆನಿಶೆಟ್ಟರ, ಮಮತಾ ಓಂಕಾರಣ್ಣನವರ, ಚೆನ್ನವ್ವ ಆನಿಶೆಟ್ಟರ್, ರತ್ನಾ ಬಿಷ್ಟಕ್ಕನವರ, ಬಸಮ್ಮ ಗುಳೇದ, ಶಿಲ್ಪಾ ಆನಿಶೆಟ್ಟರ, ನೀಲವ್ವ ಅರಳಿಹಳ್ಳಿ, ಚೆನ್ನಬಸವ ಪಾಟೀಲ, ವಿದ್ಯಾ ಮಲ್ಲಿಗಾರ, ಕವಿತಾ ಗೊಟಗೋಡಿ ಸೇರಿದಂತೆ ಇತರರು ಇದ್ದರು.