ಕಂಬಳಕ್ಕೆ ಅನುದಾನ ಹಂಚಿಕೆ ಹಾಗೂ ಕಂಬಳ ಭವನ ನಿರ್ಮಾಣಕ್ಕೆ ಜಾಗವನ್ನು ನೀಡುವಂತೆ ಕೋರಿ ರಾಜ್ಯ ಕಂಬಳ ಎಸೋಸಿಯೇಷನ್ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಮಂಗಳೂರು: ಕಂಬಳಕ್ಕೆ ಅನುದಾನ ಹಂಚಿಕೆ ಹಾಗೂ ಕಂಬಳ ಭವನ ನಿರ್ಮಾಣಕ್ಕೆ ಜಾಗವನ್ನು ನೀಡುವಂತೆ ಕೋರಿ ರಾಜ್ಯ ಕಂಬಳ ಎಸೋಸಿಯೇಷನ್ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಕಂಬಳ ತುಳುನಾಡಿನ ಕೃಷಿಕ ಬಂಧುಗಳ ಅವಿನಾಭಾವ ಸಂಬಂಧ ಹೊಂದಿ ಬೆಳೆದು ಬಂದಿದೆ. ಇಂದು ಕರಾವಳಿ ಭಾಗದಲ್ಲಿ ಪ್ರವಾಸ ಉದ್ಯಮ ಬೆಳೆಯಲು ಕಂಬಳ ಸಹಕಾರಿಯಾಗಿದೆ. ಒಂದು ಕಂಬಳದಲ್ಲಿ 5 ಕೋಟಿ ರು.ಗೂ ಅಧಿಕ ವ್ಯಾಪಾರ ವಹಿವಾಟು ನಡೆದು ಹಲವಾರು ಉದ್ಯಮಗಳು ಹುಟ್ಟಲು ಸಹಕಾರಿಯಾಗಿದೆ. ಪ್ರತಿ ಹಳ್ಳಿಯೂ ಬೆಳೆದು ಇಂದು ಕಂಬಳದಿಂದ ಜನರ ಜೀವನಕ್ಕು ದಾರಿ ದೀಪವಾಗಿದೆ. ಒಂದು ಕಂಬಳ ಸಂಘಟಿಸಲು 50 ಲಕ್ಷ ರುಪಾಯಿ ಖರ್ಚು ತಗಲುತ್ತಿದ್ದು ಇಂದು ಸಂಘಟಕರನ್ನು ಪ್ರೋತ್ಸಾಹಿಸಬೇಕಾಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ.2016-17ರ ಸಮಯ ಕಂಬಳದ ನಿಷೇಧದ ತೂಗುಗತ್ತಿಯಲ್ಲಿ ನಿಂತಾಗ ಅದಕ್ಕೆ ಇತಿಶ್ರೀ ಹಾಡಿ ವಿಧೇಯಕ ಮಂಡನೆ ಮಾಡಿ ಕಂಬಳ ಉಳಿಸಿ ಕೊಟ್ಟದ್ದು ಮುಖ್ಯಮಂತ್ರಿಗಳು. ಇದೀಗ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ ದೊರಕಿಸಿಕೊಟ್ಟು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆ ನೀಡಿದ್ದೀರಿ. ಕಂಬಳದ ಬಗ್ಗೆ ಅತ್ಯಂತ ಒಲವು ಅಭಿಮಾನ ಹೊಂದಿದ್ದಕ್ಕಾಗಿ ನಿಮ್ಮನ್ನು ಗೌರವಾದರದಿಂದ ಕಂಬಳಾಭಿಮಾನಿಗಳು ಕೊಂಡಾಡುತ್ತಿದ್ದಾರೆ.ಈಗ ಕಂಬಳಕ್ಕಾಗಿ ಕಂಬಳ ಭವನ ನಿರ್ಮಿಸಲು, ಕಂಬಳದ ಪರಿಕರ ನಿರ್ಮಾಣಕ್ಕಾಗಿ, ಕುಶಲ ಕರ್ಮಿಗಳಿಗಾಗಿ ಕಟ್ಟಡ, ತರಬೇತಿ ಶಿಬಿರಕ್ಕೆ ಈಜುಕೋಳ, ವಸತಿ, ಪ್ರವಾಸೋದ್ಯಮಕ್ಕಾಗಿ ಕಂಬಳದ ವಿಚಾರ ತಿಳಿಸುವ ವ್ಯವಸ್ಥೆಗೆ ತಿರುವೈಲು ಗ್ರಾಮದ ಸ.ನಂ.42/1ಪಿ1 ಹಾಗೂ 18/1ಪಿ1 ಸರಕಾರಿ ಜಾಗವನ್ನು ಕಂಬಳ ಅಸೋಸಿಯೇಷನ್ ಹೆಸರಿಗೆ ಮಾಡಿಕೊಡಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. 5 ಕೋಟಿ ರು. ಹಣ ಈ ಎಲ್ಲ ವ್ಯವಸ್ಥೆಗೆ ನೀಡಿದಲ್ಲಿ ಕಂಬಳ ವಿಶ್ವ ಪ್ರಸಿದ್ಧಿ ಪಡೆದು ಬೆಳೆಯುತ್ತದೆ. ವಿದೇಶಿ ಪ್ರವಾಸಿಗರಿಗೂ ತುಳುನಾಡಿನ ಸಂಸ್ಕೃತಿ ಪರಿಚಯ ಮಾಡಿಕೊಡಲು ಅನುಕೂಲವಾಗುತ್ತದೆ. ತಾವು ಇದನ್ನು ಕಂಬಳ ಅಸೋಸಿಯೇಷನ್‌ಗೆ ನೀಡಿ ಪ್ರೋತ್ಸಾಹಿಸುತ್ತೀರಿ ಎಂಬ ಭರವಸೆ ಇದೆ ಇಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.