ರೈತರ ಭೂಮಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

| Published : Aug 08 2024, 01:30 AM IST

ಸಾರಾಂಶ

ಜಮೀನುಗಳಲ್ಲಿ ಬೆಳೆ ಇದ್ದು ಬೆಳೆ ನಾಶಪಡಿಸಿ ಕಾಮಗಾರಿ ಆರಂಭಿಸಲಾಗುತ್ತಿದೆ, ಆದ ಕಾರಣ ಬೆಳೆ ರೈತರ ಕೈ ಸೇರುವವರೆಗೆ ಕಾಮಗಾರಿ ಮಾಡಬಾರದು.

ಕವಿತಾಳ: ರಸ್ತೆ ನಿರ್ಮಿಸುವ ಹಿನ್ನೆಲೆ ರೈತರಿಂದ ಪಡೆದ ಭೂಮಿಗೆ ಸೂಕ್ತ ಪರಿಹಾರ ನೀಡುವುದು ಮತ್ತು ರೈತರಿಂದ ಕಡಿಮೆ ದರದಲ್ಲಿ ಭೂಮಿ ಖರೀದಿಸಿ ಕೈಗಾರಿಕಾ ಪ್ರದೇಶ ಎಂದು ಸರ್ಕಾರಕ್ಕೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ವಂಚಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ವಿವಿಧ ಗ್ರಾಮಗಳ ರೈತರು ಸಭೆ ನಡೆಸಿ ಭಾರತ್ ಮಾಲಾ ಯೋಜನೆಯಡಿ ನಿರ್ಮಿಸುತ್ತಿರುವ 748 ಎ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೈತರಿಂದ ಪಡೆದ ಜಮೀನಿಗೆ ಕಡಿಮೆ ಪರಹಾರ ನಿಗದಿ ಮಾಡಿದ್ದಾರೆ. ಜಮೀನುಗಳಲ್ಲಿ ಬೆಳೆ ಇದ್ದು ಬೆಳೆ ನಾಶಪಡಿಸಿ ಕಾಮಗಾರಿ ಆರಂಭಿಸಲಾಗುತ್ತಿದೆ, ಆದ ಕಾರಣ ಬೆಳೆ ರೈತರ ಕೈ ಸೇರುವವರೆಗೆ ಕಾಮಗಾರಿ ಮಾಡಬಾರದು. ಪರಿಹಾರ ಮೊತ್ತ ರೈತರಿಗೆ ನೀಡಿದ ನಂತರ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು. ರೈತರ ಸಮಸ್ಯೆಗಳ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ರೈತರಾದ ಶರಣಪ್ಪ, ಸಿದ್ದಲಿಂಗಪ್ಪ, ಅಶೋಕ, ಹುಚ್ಚರಡ್ಡಿ, ಶಿವಪ್ಪ ಕುರಿ, ಭೀಮನಗೌಡ, ಶಂಕ್ರಪ್ಪ, ಶರಣಪ್ಪ , ಮಲ್ಲನಗೌಡ, ಬಸವರಾಜ ವಟಗಲ್, ಆದನಗೌಡ, ಕಾಸೀಂಅಲೀ, ಹುಚ್ಚಸಾಬ್ ಮತ್ತಿತರರು ಸೇರಿದಂತೆ ಅಮೀನಗಡ, ಗೋನವಾರ, ಆನಂದಗಲ್, ಕೊಟೇಕಲ್ ಗ್ರಾಮಗಳ ರೈತರು ಸಭೆಯಲ್ಲಿ ಭಾಗವಹಿಸಿದ್ದರು.