ಅರ್ಚಕನ ಆತ್ಮಹತ್ಯೆಗೆ ಕಾರಣರಾದವರ ಬಂಧನಕ್ಕೆ ಆಗ್ರಹ

| Published : May 13 2025, 11:49 PM IST / Updated: May 13 2025, 11:50 PM IST

ಅರ್ಚಕನ ಆತ್ಮಹತ್ಯೆಗೆ ಕಾರಣರಾದವರ ಬಂಧನಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಗಂಗೂರು ಗ್ರಾಮದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದ ಅರ್ಚಕ ದೇವಾಲಯದಲ್ಲೇ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಆರ್ಚಕರ ಮತ್ತು ಆಗಮಿಕರ ಸಂಘದಿಂದ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಇದೇ ವೇಳೆ ಸಂಘದ ರಾಜ್ಯಾಧ್ಯಕ್ಷ ಎಂ.ಎಸ್. ವೆಂಕಟಚಲಯ್ಯ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ತಾಲೂಕು ಗಂಗೂರು ಗ್ರಾಮದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದ ವಂಶ ಪಾರಂಪರ್ಯ ಅರ್ಚಕರಾದ ರಂಗಸ್ವಾಮಿರವರು ದೇವಾಲಯದಲ್ಲಿ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ಕಾರಣರಾದ ಜಿ.ಆರ್‌. ರಾಮಚಂದ್ರೇಗೌಡ, ಜಿ.ಪಿ. ಸಿದ್ದೇಶ್, ಮೂಡಲಗಿರಿ ಗೌಡ, ಶಿವಲಿಂಗೇಗೌಡ, ಗುರುಮೂರ್ತಿ ದೇವಾಲಯದಲ್ಲಿ ಕಮಿಟಿ ಮಾಡಿಕೊಂಡು ಪ್ರತಿನಿತ್ಯ ಅರ್ಚಕರಿಗೆ ಇನಾಂ ರದ್ದತಿಯಲ್ಲಿ ಸರ್ಕಾರದಿಂದ ಮಂಜೂರಾದ ಜಮೀನನನ್ನು ನಮ್ಮ ಕಮಿಟಿಗೆ ಮಾಡಿಕೊಡಬೇಕಾಗಿ ಕಮಿಟಿಯವರು ಮನಸೋ ಇಚ್ಛೆ ಬೈಯುತ್ತ ಮಾನಸಿಕ ಹಿಂಸೆ ಕೊಡುತ್ತಿದ್ದರಂತೆ. ಇದರ ಬಗ್ಗೆ ತಾಲೂಕು ತಹಸೀಲ್ದಾರ್‌ಗೆ ಮೃತರಾದ ರಂಗಸ್ವಾಮಿರವರು ಅರ್ಜಿಯು ಸಹ ಕೊಟ್ಟಿರುತ್ತಾರೆ ಎಂದರು. ಅರ್ಚಕರು ಮೃತರಾದರೆ ಇಲಾಖೆಯಿಂದ ಸೌಜನ್ಯಕ್ಕಾದರೂ ಮೃತರ ಮನೆಗೆ ಭೇಟಿ ಕೊಟ್ಟಿರುವುದಿಲ್ಲ. ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಮೃತರ ಕುಟುಂಬಕ್ಕೆ ರು.೧೦ ಲಕ್ಷ ಪರಿಹಾರ ನೀಡಬೇಕಾಗಿ ನಮ್ಮ ಸಂಘವು ಈ ದಿವಸ ಪ್ರತಿಭಟನೆಯ ಮೂಲಕ ಒತ್ತಾಯ ಪಡಿಸುತ್ತೇವೆ.

ಅರ್ಚಕರ ಮರಣಕ್ಕೆ ಕಾರಣರಾದ ವ್ಯಕ್ತಿಗಳನ್ನು ಇದುವರೆಗೂ ಪೊಲೀಸರು ಬಂಧಿಸಿರುವುದಿಲ್ಲ. ಈ ಕೂಡಲೇ ಅವರನ್ನು ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸುವಂತೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಮುಜರಾಯಿ ಸಚಿವರಿಗೆ ನಮ್ಮ ಸಂಘದಿಂದ ಒತ್ತಾಯ ಮಾಡುವುದಾಗಿ ಹೇಳಿದರು.

ಇದೇ ವೇಳೆ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್, ಹಾಸನ ತಾಲೂಕು ಅಧ್ಯಕ್ಷ ಜಗದೀಶ್, ಶ್ರೀಧರ್‌, ಬೇಲೂರು ತಾಲೂಕು ಪುಟ್ಟಣ್ಣಯ್ಯ, ಸಿದ್ದೇಗೌಡ, ಮಂಡ್ಯ ಜಿಲ್ಲೆಯ ಅಧ್ಯಕ್ಷ ಬಸಪ್ಪ, ನಾಗಮಂಗಲ ತಾಲೂಕು ಅಧ್ಯಕ್ಷ ಸಂತೋಷ್, ಬೆಂಗಳೂರು ಕುಣಿಗಲ್ ಕಾರ್ಯದರ್ಶಿ ಗೋಪಿನಾಥ್ ಇತರರು ಉಪಸ್ಥಿತರಿದ್ದರು.