ಸಾರಾಂಶ
ಕೋಲಾರ: ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮ್‌ಗಳನ್ನು ನಿಷೇಧಿಸಬೇಕೆಂದು ನಮ್ಮ ಕರ್ನಾಟಕ ಸೇನೆ ರಾಜ್ಯ ಕಾರ್ಯದರ್ಶಿ ಸಿ.ಶಾಂತ ಆಗ್ರಹಿಸಿದ್ದಾರೆ. ಆನ್‌ಲೈನ್ ಬೆಟ್ಟಿಂಗ್ ಗೇಮ್ ನಿಷೇಧಕ್ಕೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಹಾಕಲು ನಮ್ಮ ಕರ್ನಾಟಕ ಸೇನೆ ಕೋಲಾರ ಜಿಲ್ಲಾ ಘಟಕದಿಂದ ನಮ್ಮ ನಡೆ ಬೆಳಗಾವಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮ್‌ಗಳಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಆದ್ದರಿಂದ ಇವುಗಳ್ನು ರಾಜ್ಯ ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜು, ಜಿಲ್ಲಾಧ್ಯಕ್ಷ ಎಸ್.ಎಂ.ರಾಜು, ಮಹಿಳಾ ಜಿಲ್ಲಾಧ್ಯಕ್ಷೆ ಕುಮಾರಿ, ತಾಲ್ಲೂಕು ಅಧ್ಯಕ್ಷ ನವೀನ್, ಸುನೀಲ್, ಮೋಹನ್, ಮಂಜು, ಆಂಜಿ ಕನ್ನಡಿಗ, ಜಗನ್ನಾಥ್ ಇದ್ದರು.
........ಪ್ಯಾನೆಲ್ ಫೋಟೋ.....
೬ಕೆಎಲ್‌ಆರ್-೨ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮ್‌ಗಳನ್ನು ನಿಷೇಧಿಸುವಂತೆ ಸರ್ಕಾರವನ್ನು ಆಗ್ರಹಿಸಲು ಕೋಲಾರದಿಂದ ನಮ್ಮ ಕರ್ನಾಟಕ ಸೇನೆಯು ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಾಕಲು ತೆರಳಿತು. ಸಂಘಟನೆಯ ಕಾರ್ಯದರ್ಶಿ ಸಿ.ಶಾಂತ ಇದ್ದರು.