ಕೊಲ್ಹಾರ ಬಳಿ ಗಲ್ಲು ಗಣಿಗಾರಿಕೆ ಬಂದ್‌ಗೆ ಆಗ್ರಹ

| Published : Nov 11 2024, 12:49 AM IST

ಕೊಲ್ಹಾರ ಬಳಿ ಗಲ್ಲು ಗಣಿಗಾರಿಕೆ ಬಂದ್‌ಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ಕೊಲ್ಹಾರದ ಸರ್ವೇ ನಂ.೭೧೮ರಲ್ಲಿ ಕಲ್ಲು ಗಣಿಗಾರಿಕೆಯಿಂದಾಗಿ ಸುತ್ತಮುತ್ತಲಿನ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅತಿ ದೊಡ್ಡ ಸೇತುವೆಗೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಕಲ್ಲಿನ ಕ್ವಾರಿಯನ್ನು ಬಂದ್ ಮಾಡುವಂತೆ ರೈತ ಸಂಘ, ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಕೊಲ್ಹಾರದ ಸರ್ವೇ ನಂ.೭೧೮ರಲ್ಲಿ ಕಲ್ಲು ಗಣಿಗಾರಿಕೆಯಿಂದಾಗಿ ಸುತ್ತಮುತ್ತಲಿನ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅತಿ ದೊಡ್ಡ ಸೇತುವೆಗೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಕಲ್ಲಿನ ಕ್ವಾರಿಯನ್ನು ಬಂದ್ ಮಾಡುವಂತೆ ರೈತ ಸಂಘ, ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಸೋಮು ಬಿರಾದಾರ ಈ ವೇಳೆ ಮಾತನಾಡಿ, ಇಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಬ್ಲಾಸ್ಟ್‌ ಮಾಡುವುದರಿಂದ ಕಲ್ಲಿನ ಚೂರುಗಳು ಸುತ್ತಮುತ್ತ ವಾಸಿಸುವ ಗುಡಿಸಲು ಹಾಗೂ ಮನೆಗಳ ಮೇಲೆ ಬೀಳುತ್ತಿದ್ದು, ಇದರಿಂದ ಸಾರ್ವಜನಿಕರು ಭಯದಲ್ಲಿ ಬದುಕುತ್ತಿದ್ದಾರೆ. ಕೊಲ್ಹಾರದ ಸೇತುವೆ ಕೂಡ ಸಮೀದದಲ್ಲಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಭಾಗದಲ್ಲಿ ಮುಂದೆಯೂ ಯಾರಿಗೂ ಅನುಮತಿ ನೀಡಬಾರದು ಎಂದರು.

ಜಿಲ್ಲಾಧ್ಯ್ಯಕ್ಷ ಸಂಗಮೇಶ ಸಗರ ಮಾತನಾಡಿ, ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಲ್ಲಿ ಆಗುಹೋಗು ಸಮಸ್ಯೆಗಳ ಕುರಿತು ಪರೀಕ್ಷೆ ಮಾಡಬೇಕು. ಅದರಿಂದ ಆಗುವ ಅನಾಹುತಗಳನ್ನು ಎಚ್ಚೆತ್ತು ಕೂಡಲೇ ಅವುಗಳ ವಿರುದ್ಧ ಕಾನೂನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಮಲ್ಲಿಕಾರ್ಜುನ ಮಹಾಂತಮಠ, ಕಲ್ಲಪ್ಪ ಗಿಡ್ಡಪ್ಪಗೊಳ, ಶ್ರೀಶೈಲ ಸೊನ್ನದ, ಯಲ್ಲಪ್ಪ ಸೋನ್ನದ, ಶಶಿಕಾಂತ ಬಿರಾದಾರ, ಮಲ್ಲಿಕಾರ್ಜುನ ಸೊನ್ನದ, ವಿರುಪಾಕ್ಷಿ ಅಥಣಿ, ಸಂಗಪ್ಪ ಅಥಣಿ, ಸಂಗಪ್ಪ ಟಕ್ಕೆ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ರಾಮನಗೌಡ ಪಾಟೀಲ, ಪುಂಡಲಿಕ ಸೊನ್ನದ, ವಿ,ಎಂ.ಮನ್ನಿಕೇರಿ, ಹಣಮಂತ ಸೊನ್ನದ, ಮಹಾದೇವ ಕದಂ, ಸಂಗಮೇಶ ಹುಣಸಗಿ, ಸುಭಾಸ ಸಜ್ಜನ, ಜಯಸಿಂಗ್‌ ರಜಪೂತ, ಲಚ್ಚಾರುಮ ರಜಪೂತ ಸೇರಿ ಇತರರು ಇದ್ದರು.