ಸಾರಾಂಶ
ಹಾವೇರಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ನಿರಂತರ ಕೆಲಸ ನೀಡಬೇಕು. ಅವರನ್ನು ಕೆಲಸದಿಂದ ಕೈಬಿಡಕೂಡದು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಹುಬ್ಬಳ್ಳಿ ಇದರ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಭೆಯಲ್ಲಿ ಮಾತನಾಡಿ, ಹೊರಗುತ್ತಿಗೆಯಲ್ಲಿ ಕೆಲಸವನ್ನು ಮಾಡುವ ಪ್ರತಿಯೊಬ್ಬರೂ ಸಂಘಟನೆ ಜತೆಗೆ ನಿಲ್ಲಬೇಕು. ಸಂಘಟನೆ ಬಲ ಇದ್ದಾಗ ಮಾತ್ರ ಸರ್ಕಾರದ ವಿರುದ್ಧ ಹೋರಾಡಿ ಹಕ್ಕು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಒಂದು ಎಂಬ ಮನೋಭಾವನೆಯೊಂದಿಗೆ ಸಂಘಟನೆಗೆ ಕೈಜೋಡಿಸಿ ಎಂದರು.ಸಂಘಟನೆ ಬಲಗೊಳಿಸುವ ವಿಚಾರವಾಗಿ ಹಾವೇರಿಗೆ ಆಗಮಿಸಿದ್ದೇವೆ. ಸಭೆಯನ್ನು ನಡೆಸುತ್ತಾ ಬಂದಿದ್ದೇವೆ. ನಿಮ್ಮ ಸಹಕಾರ ಅತಿ ಮುಖ್ಯ. ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವವರಿಗೆ ವೇತನ ಹೆಚ್ಚಳ ಆಗಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದಾಗಲೂ ಕೆಲವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಅವರನ್ನು ಮರಳಿ ಕೆಲಸಕ್ಕೆ ತಗೆದುಕೊಳ್ಳಬೇಕು. ಪಿಎಫ್‌ನಲ್ಲಿ ಅನ್ಯಾಯ ನಡೆಯುತ್ತಿದೆ. ಇದು ನಿಲ್ಲಬೇಕು. ಏಜೆನ್ಸಿ ರದ್ದುಗೊಳಿಸಿ ಬೀದರ್ ಮಾದರಿ ಜಾರಿಯಾಗಬೇಕು ಎಂದು ಸಲಹೆ ಮಾಡಿದರು.ಕಡ್ಡಾಯವಾಗಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಣೆ ಆಗಬೇಕು. ಇದೇ ಮೇ 1ರಂದು ಕಾರ್ಮಿಕರ ದಿನಾಚರಣೆ ಅವಧಿಯಲ್ಲಿ ಕಾಯಂ ನೌಕರರೆಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಲೇಬೇಕು ಎಂದು ಹಕ್ಕೊತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸುಲೋಜನಾ ಪೋತನೀಸ್, ರಾಜ್ಯ ಖಜಾಂಚಿ ಸುಮಿತ್ರಾ ಪೋತನಿಸ್, ರಾಜ್ಯ ಕಾರ್ಯದರ್ಶಿ ವಿ.ಜಿ. ಸೊಪ್ಪಿಮಠ, ಜಂಟಿ ಕಾರ್ಯದರ್ಶಿ ಎಂ.ಆರ್. ದೊರೆಸ್ವಾಮಿ, ರಾಜ್ಯ ಸಮಿತಿ ಆಡಳಿತ ಮಂಡಳಿ ಸದಸ್ಯರಾದ ಕೆ. ಬಸವರಾಜ, ಜಂಟಿ ಕಾರ್ಯದರ್ಶಿ ನಾಗರಾಜ ಕಲಾಲ, ಜಿಲ್ಲಾ ಮುಖಂಡರಾದ ಸುಭಾಸ್ ಕ್ಯಾಲಕೊಂಡ ಸೇರಿದಂತೆ ಹಾಸ್ಟೆಲ್ ಹೊರಗುತ್ತಿಗೆ ಅಡುಗೆ ಸೇವಾದಾರರು ಇದ್ದರು. ಎರಡು ದಿನ ಬ್ಯಾಡಗಿ ಎಪಿಎಂಸಿ ವಹಿವಾಟು ಇರಲ್ಲ
ಹಾವೇರಿ: ಏ. 30ರಂದು ಬಸವ ಜಯಂತಿ ಹಾಗೂ ಮೇ 1ರಂದು ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸರ್ಕಾರಿ ರಜೆ ಇರುವುದರಿಂದ ಹಾಗೂ ವರ್ತಕರ ಸಂಘದ ಮನವಿ ಮೇರೆಗೆ ಎರಡು ದಿನಗಳಂದು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಇರುವುದಿಲ್ಲ. ಹಾಗಾಗಿ ರೈತರು ಏ. 30 ಮತ್ತು ಮೇ 1ರಂದು ಮಾರುಕಟ್ಟೆಗೆ ಒಣಮೆಣಸಿನಕಾಯಿ ತರಬಾರದೆಂದು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಮೇ 2ರಂದು ಎಂದಿನಂತೆ ಒಣಮೆಣಸಿಕಾಯಿ ಇ- ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.