ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ವೇಮಗಲ್ ಹೋಬಳಿಯ ಅಮ್ಮನಲ್ಲೂರು ಗ್ರಾಪಂ ವ್ಯಾಪ್ತಿಯ ಕೃಷ್ಣಾಪುರದಲ್ಲಿಯೇ ಮತಗಟ್ಟೆ ಕೇಂದ್ರವನ್ನು ಮರು ಸ್ಥಾಪಿಸಬೇಕು.ಇಲ್ಲದೇ ಹೋದರೆ ಲೋಕಸಭಾ ಚುನಾವಣೆಯ ಮತದಾನಕ್ಕೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ. ಪ್ರಗತಿಪರ ರೈತ ರಾಜಣ್ಣ ಮಾತನಾಡಿ, ಸುಮಾರು ೩೦ ವರ್ಷದಿಂದ ಕೃಷ್ಣಾಪುರ ಗ್ರಾಮದ ಮತಗಟ್ಟೆಯಲ್ಲಿಯೇ ಗ್ರಾಮಸ್ಥರು ಮತದಾನ ಮಾಡಿಕೊಂಡು ಬಂದಿದ್ದು, ಈ ಚುನಾವಣೆಯಲ್ಲಿ ಅಮ್ಮನಲ್ಲೂರು ಗ್ರಾಮಕ್ಕೆ ಮತದಾನದ ಕೇಂದ್ರವನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.3 ಕಿಮೀ ದೂರದಲ್ಲಿ ಮತಗಟ್ಟೆ
ಕೃಷ್ಣಾಪುರದಲ್ಲಿ ಸುಮಾರು ೧೪೦ ಮನೆಗಳಿದ್ದು ೩೬೦ಕ್ಕೂ ಹೆಚ್ಚು ಮತದಾರರಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗಡಿ ಭಾಗದಲ್ಲಿ ನಮ್ಮ ಗ್ರಾಮವಿದ್ದು ಜಿಲ್ಲಾಧಿಕಾರಿಯು ೪೦೦ ಮತದಾರರಿಲ್ಲ ಎಂಬ ಕಾರಣವನ್ನು ನೀಡಿ ಅಮ್ಮನಲ್ಲೂರು ಗ್ರಾಮಕ್ಕೆ ಮತಗಟ್ಟೆ ಕೇಂದ್ರವನ್ನು ವರ್ಗಾವಣೆ ಮಾಡಲಾಗಿದೆ. ಸುಮಾರು ೩ ಕಿಲೋ ಮೀಟರ್ ದೂರವಿರುವ ಅಮ್ಮನಲ್ಲೂರು ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲ. ಗ್ರಾಮದ ಹಿರಿಯರು, ಅಂಗವಿಕಲರು ಗ್ರಾಮಕ್ಕೆ ಹೋಗಿ ಮತದಾನ ಮಾಡಿ ಬರಲು ಸಾಧ್ಯವಾಗುವುದಿಲ್ಲ ಎಂದರು.ಪ್ರಚಾರಕ್ಕೂ ಅವಕಾಶ ನೀಡೋಲ್ಲಹಿರಿಯ ಮುಖಂಡ ಶ್ರೀನಿವಾಸ್ ಮಾತನಾಡಿ, ಕಳೆದ ಎಲ್ಲಾ ಚುನಾವಣೆಯಲ್ಲಿ ನಮ್ಮ ಗ್ರಾಮದಲ್ಲಿಯೇ ಮತದಾನ ಮಾಡಿದ್ದೇವೆ. ಹಾಗಾಗಿ ತಮ್ಮ ಗ್ರಾಮದಲ್ಲಿಯೇ ಮತಗಟ್ಟೆ ಸ್ಥಾಪಿಸಬೇಕೆಂದು ಗ್ರಾಮದ ಪ್ರತಿಯೊಬ್ಬರ ಒತ್ತಾಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಗ್ರಾಮದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದರುಗ್ರಾಪಂ ಸದಸ್ಯ ರಾಮಚಂದ್ರಪ್ಪ, ಗ್ರಾಮಸ್ಥರಾದ ಮಂಜುನಾಥ್, ಸತೀಶ್ ಕುಮಾರ್, ಲಕ್ಷ್ಮಣ್,ಮುನೇಗೌಡ, ಬತ್ತೇಶ್, ರಾಜಶೇಖರ್, ಕೆಂಪೇಗೌಡ, ವೆಂಕಟಪ್ಪ, ಮುನಿರಾಜು, ನರೇಶ್ ಇದ್ದರು.