ಜೀತವಿಮುಕ್ತರಿಗೆ ಸೌಲಭ್ಯ ಒದಗಿಸಲು ಆಗ್ರಹ

ಕನ್ನಡಪ್ರಭವಾರ್ತೆ ಮಧುಗಿರಿ

ಕೇಂದ್ರ ಮತ್ತು ರಾಜ್ಯ ಸರ್ಕಾರ ಎಸ್‌ಓಪಿ ಸೆಕ್ಷನ್‌ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಮಧುಗಿರಿ ತಾಲೂಕು ಜೀವಿಕ ಸಂಘಟನೆಯಿಂದ ಐದುನೂರಕ್ಕೂ ಅಧಿಕ ಜೀತವಿಮುಕ್ತರು ಪಟ್ಟಣದ ಅಂಬೇಡ್ಕರ್ ಪ್ರತಿಮೆಯಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟಿಸಿ ಮೆರವಣಿಗೆಯಲ್ಲಿ ಸಾಗಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪರವರಿಗೆ ಮನವಿ ಪತ್ರ ಸಲ್ಲಿಸಿದರು.

ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಡಿ.ಟಿ.ಸಂಜೀವಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರ 2016ರ ಪುನರ್‌ ವಸತಿ ಯೋಜನೆಯ ಕಾಲಂ 6.2 ಮತ್ತು 6.3ರಲ್ಲಿ ಕಾನೂನಿಗೆ ವಿರುದ್ಧವಾಗಿರುವ ಅಂಶಗಳನ್ನು ತೆಗೆಯಬೇಕು. ಜೀತ ಮುಕ್ತಿಯ ಎಲ್ಲ ಜೀತದಾಳುಗಳಿಗೆ ಅಂತ್ಯೋದಯ ಪಡಿತರ ಕಾರ್ಡ್‌ ವಿತರಿಸಬೇಕು.ಪ್ರತಿ ಜೀತ ವಿಮುಕ್ತರಿಗೆ ನಿವೇಶನ ಮತ್ತು ಮನೆ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಜೀವಿಕ ಹನುಮಂತರಾಯಪ್ಪ,ತಾಲೂಕು ಸಂಚಾಲಕ ನರಸಿಂಹಮೂರ್ತಿ, ದೊಡ್ಡಹೊಸಹಳ್ಳಿ ಮೂರ್ತಿ ಸರ್ವೋದಯ ಮಹಾಲಿಂಗಪ್ಪ,ವಕೀಲನರಸಿಂಹಮೂರ್ತಿ,ಶಿವಕುಮಾರ್‌,ಡಿಎಸ್‌ಎಸ್‌ ಹರಿರಾಮ್‌,ಒಕ್ಕೂಟದ ಮುಖಂಡರಾದ ಕದರಪ್ಪ, ತಿಮ್ಮಯ್ಯ, ಗೋವಿಂದಪ್ಪ, ಸಿದ್ದಪ್ಪ, ನರಸಿಂಹಪ್ಪ, ಆಂಜಿನಪ್ಪ, ಪಾಲಣ್ಣ, ಕಾಳೇನಹಳ್ಲಿ ಕುಮಾರ್‌, ನೇಮಿರಾಜ್‌ ಸೇರಿದಂತೆ ಅನೇಕರು ಭಾಗವಹಿಸಿದ್ದರು.