ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಸರ್ಕಾರಿ ಶಿಕ್ಷಕರಲ್ಲಿಯೇ ಭೇದ, ಭಾವ ಮಾಡುತ್ತಿದೆ. ಸೇವಾ ಜೇಷ್ಠತೆ ಪರಿಗಣಿಸದೇ ಮುಂಬಡ್ತಿ ನೀಡುವುದು ಯಾವ ನ್ಯಾಯ?. ಪದವೀಧರ ಶಿಕ್ಷಕರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಪ್ರವಾಸಿ ಮಂದಿರದಿಂದ ಹೊರಟು ಬಸವೇಶ್ವರ ವೃತ್ತದ ಮೂಲಕ ನಡೆದು ಮಿನಿ ವಿಧಾನಸೌಧ ತಲುಪಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮುಖಂಡ ಅಲ್ಲಾಭಕ್ಷ ವಾಲಿಕಾರ, ಜಯರಾಮ ಚವ್ಹಾಣ, ಡಾ.ಕಾಂತು ಇಂಡಿ, ಪಿ.ಜಿ ಕಲ್ಮನಿ ಮಾತನಾಡಿ, ಪದವೀಧರ ಶಿಕ್ಷಕರ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ. ಕಳೆದ 6-7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸೇವಾ ನಿರತ ಪಧವೀಧರ ಶಿಕ್ಷಕರಿಗೆ ಅಗುತ್ತಿರುವ ಅನ್ಯಾಯ ಆಗುತ್ತಿರುವುದನ್ನು ಅನೇಕ ಬಾರಿ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಅಂತಿಮವಾಗಿ ಸ್ಪಂದಿಸದೇ ಇರುವುದರಿಂದ ಬೀದಿಗಳಿದು ಹೋರಾಟ ಮಾಡುವುದು ಅನಿವಾರ್ಯ ಬಂದಿದೆ ಎಂದು ತಿಳಿಸಿದರು.ರಾಜ್ಯದ ಸುಮಾರು 1.30 ಲಕ್ಷ ಪದವೀಧರ ಶಿಕ್ಷರಿದ್ದಾರೆ .ನಮ್ಮ ಬೇಡಿಕೆ ಸಕಾಲದಲ್ಲಿ ಇಡೇರಿಸದೆ ಇದ್ದರೇ ತರಗತಿಗಳು ಬಹಿಸ್ಕರಿಸಿ ರಾಜ್ಯ ವ್ಯಾಪಿ ಹೋರಾಟ ಮಾಡಲಾಗುವುದು. ಆಗಸ್ಟ್ 12ರಂದು ರಾಜ್ಯಧಾನಿ ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆ ಆಧರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ನಂತರ ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ವೈ.ಟಿ.ಪಾಟೀಲ, ಪಿ.ಎಸ್.ಚಾಂದಕವಟೆ, ಎಂ.ಎಂ.ವಾಲೀಕಾರ, ಎಸ್.ವಿ.ಹರಳಯ್ಯ, ಟಿ.ಕೆ.ಜಂಬಗಿ, ಆರ್.ಎಸ್.ನಾರಾಯಣಕರ್, ಸಿ.ಎಸ್.ಝಳಕಿ, ಎಸ್.ಡಿ.ಪಾಟೀಲ, ಎಸ್.ಆರ್.ಪಾಟೀಲ, ಅತಲ್ತಾಫ ಬೋರಾಮಣಿ, ಜಯಶ್ರೀ ತೆಲಗ, ಆನಂದ ಕೆಂಬಾಗಿ, ಎಂ.ಎಂ.ನೇದಲಗಿ, ಬಿ.ಎಂ.ವಠಾರ, ಅನೀತಾ ರಾಠೋಡ, ವಿ.ಪಿ.ಅರವತ್ತು, ಪ್ರಕಾಶ ಐರೋಡಗಿ, ಎಂ.ಸಿ.ಗಿರಣಿವಡ್ಡರ್, ಎಸ್.ಸಿ.ಗಿರಣಿ, ಸುರೇಶ ಚವ್ಹಾಣ, ಅಂಬರೀಶ ರಾಠೋಡ, ಸಿ.ಎಸ್.ಝಳಕಿ, ಎಫ್.ಎಂ.ಬೋರಾಮಣಿ, ಜಯರಾಮ ಚವ್ಹಾಣ, ರಜೀಯಾಬೇಗಂ ಚಪ್ಪರಬಂದ, ಕೆ.ಎಸ್.ಕಾಂಬಳೆ, ವಿಜಯಲಕ್ಷ್ಮೀ ಡಿಸ್ಲೆ, ಆರ್.ವಿ.ಪಾಟೀಲ, ಪಿ.ಜಿ.ಕಲ್ಮನಿ, ಬಸವರಾಜ ಗೊರನಾಳ, ಎಂ.ಡಿ.ಕಂಟೀಕಾರ, ರವಿ ಬಿರಾದಾರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.