ಶಿಗ್ಗಾಂವಿ ತಾಲೂಕಿನ ತಡಸ ಭಾಗದಲ್ಲಿಯೇ ಕೆರೆಗಳನ್ನು ವರದಾ ನದಿಯಿಂದ ತುಂಬಿಸುವಂತೆ ಅಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಅರ್ಪಿಸಿ ಒತ್ತಾಯಿಸಿದರು.

ಶಿಗ್ಗಾಂವಿ: ತಾಲೂಕಿನ ತಡಸ ಭಾಗದಲ್ಲಿಯೇ ಕೆರೆಗಳನ್ನು ವರದಾ ನದಿಯಿಂದ ತುಂಬಿಸುವಂತೆ ಅಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಅರ್ಪಿಸಿ ಒತ್ತಾಯಿಸಿದರು.

೨೦೨೧-೨೨ರಲ್ಲಿ ಅಂದಿನ ಶಾಸಕರಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಏತ ನೀರಾವರಿ ಯೋಜನೆಯಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ವರದಾ ನದಿಯಿಂದ ಪೈಪ್ ಲೈನ್ ಅಳವಡಿಕೆ ಕಾರ್ಯ ಮಾಡಿಸಿದ್ದು ಅದು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಈಗ ಬರಗಾಲ ಆವರಿಸಿರುವುದರಿಂದ ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ,

ಈ ಕುರಿತು ಇಂದಿನ ಶಾಸಕ ಯಾಸೀರಅಹ್ಮದ ಖಾನ್ ಪಠಾಣ್ ಅವರಿಗೆ ಹಾಗೂ ಜಲಮಂಡಳಿಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಅರ್ಪಿಸಿ ಒತ್ತಾಯಿಸಿದರೂ ರೈತರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಮುಂದಿನ ೭ ದಿನಗಳ ಒಳಗಾಗಿ ನೀರು ಬಿಡದೆ ಹೋದರೆ ತಡಸ ಗ್ರಾಮದ ಹುಬ್ಬಳ್ಳಿ - ಶಿರಸಿ ರಸ್ತೆಯನ್ನು ಬಂದ್ ಮಾಡಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಕರಿಯಪ್ಪ ಆಲೂರು, ಉಪಾಧ್ಯಕ್ಷ ಶಿವಣ್ಣ ಗಬ್ಬುರ್, ಕಾರ್ಯದರ್ಶಿ ಪ್ರಕಾಶ್ ನಿಕ್ಕಂ, ರೈತ ಮುಖಂಡರಾದ ನಾಗಪ್ಪ ಕಟಗಿ, ಪಮ್ಮಣ್ಣ ತಿಮ್ಮಾಪುರ, ಕುಬೇರಪ್ಪ ಕಂಪ್ಲಿ, ಕಪ್ ಮುದುಕಣ್ಣ ದಂಗೆನೋರ್ ಹಾಗೂ ರೈತ ಸಂಘದ ಸದಸ್ಯರು, ರೈತರು ಇದ್ದರು.