ಸಾರಾಂಶ
ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ 5 ಯೋಜನೆಗಳಲ್ಲಿ ಒಂದು ಯೋಜನೆಯಾದ ಶಕ್ತಿ ಯೋಜನೆ ಆಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತನರು ಇದ್ದು ಇವರಿಗೆಲ್ಲ ಉಚಿತ ಬಸ್ ಪಾಸ್ ನೀಡಲಿ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿಕಲ ಚೇತನರಿಗೆ ಉಚಿತ ಬಸ್ ಪಾಸ್ ವಿತರಣೆಗೆ ಆಗ್ರಹಿಸಿ ಕರ್ನಾಟಕ ವಿಕಲ ಚೇತನರ ಓಕ್ಕೂಟದಿಂದ ಜಿಲ್ಲಾಡಳಿತ ಭವನದ ಮುಂದೆ ಗುರುವಾರ ಸಾಂಕೇತಿಕ ಧರಣಿ ನಡೆಸಿದರು.ಈ ವೇಳೆ ಕರ್ನಾಟಕ ವಿಕಲ ಚೇತನರ ಒಕ್ಕೂಟ(ಕೆವಿಓ)ದ ಪದಾಧಿಕಾರಿ ಕಿರಣ್ ನಾಯಕ್ ಮಾತನಾಡಿ, 2025 ನೇ ಸಾಲಿನ ವಿಕಲಚೇತನರಿಗೆ ನವೀಕರಣ ಮತ್ತು ನೂತನ ಬಸ್‌ಪಾಸ್‌ಗಳಿಗೆ ರೂ 660 ಶುಲ್ಕವನ್ನು ನಿಗದಿಪಡಿಸಿದ್ದಾರೆ. ಇದನ್ನು ಡಿ.ಡಿ ರೂಪದಲ್ಲಿ ನೀಡಬೇಕೆಂದು ಹಾಗೂ ಪೋರ್ಟಲ್ ಅರ್ಜಿಗಳನ್ನು ಸೇವಾ ಸಿಂಧು ಮುಖಾಂತರ ಅರ್ಜಿಗಳನ್ನು ಹಾಕಬೇಕೆಂದು ತಿಳಿಸಿದ್ದಾರೆ. ಇದನ್ನು ವಾಪಸ್ ಪಡೆಯಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ 5 ಯೋಜನೆಗಳಲ್ಲಿ ಒಂದು ಯೋಜನೆಯಾದ ಶಕ್ತಿ ಯೋಜನೆ ಆಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತನರು ಇದ್ದು ಇವರಿಗೆಲ್ಲ ಉಚಿತ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿದರು.ಡೀಸಿ ಮೂಲಕ ಸಿಎಂಗೆ ಮನವಿ
ವಿಶೇಷ ಚೇತನರಿಗೆ ಸಿಗಬೇಕಾದ ಸೌಲಭ್ಯಗಳಿಗೆ ಕತ್ತರಿ ಹಾಕದೆ, ಬೇರೆಯವರಿಗೆ ನೀಡಿದಂತೆ ನಮಗೂ ಸೌಲಭ್ಯ ನೀಡಲಿ. ಕೂಡಲೆ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಅಂಗವಿಕಲರಿಗೂ ಉಚಿತ ಬಸ್ ಪಾಸ್ ವಿತರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು. ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ವಿಕಲಚೇತನದ ಒಕ್ಕೂಟದ ಪದಾಧಿಕಾರಿಗಳಾದ ಕೆ.ಜಿ.ಸುಭ್ರಮಣಿ,ವೆಂಕಟಶಿವಪ್ಪ, ಕೆ.ಸಿ.ಮಮತಾ.ಸೌಭಾಗ್ಯಮ್ಮ, ನರಸಿಂಹಮೂರ್ತಿ, ಚಂದ್ರಶೇಖರ್,ಹೆಚ್.ಎಸ್.ಕೃಷ್ಣಪ್ಪ, ಮಂಜುನಾಥ್,ಮುರಳಿಧರ್, ಮತ್ತಿತರರು ಇದ್ದರು.