ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸವಿತಾ ಸಮಾಜದ ಗೌರವಕ್ಕೆ ಚ್ಯುತಿ ತರುವ ನಿಷೇದಿತ ಪದ ಬಳಕೆಯನ್ನು ನಿಷೇಧಿಸುವ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿ ತಾಲೂಕು ಸವಿತಾ ಸಮಾಜದ ವತಿಯಿಂದ ತಹಸೀಲ್ದಾರ್ ಮೋಹನ್‌ಕುಮಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ತಾಲೂಕು ಸವಿತಾ ಸಮಾಜದ ಮುಖಂಡ ಟಿ.ಸಿ ಗೋವಿಂದರಾಜು ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಸವಿತಾ ಸಮಾಜದ ನಿಷೇಧಿತ ಪದವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿರವರು ಬಳಸಿ ನಮ್ಮ ಕುಲ ಕಸುಬಿನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಈ ಪದ ಬಳಕೆಯಿಂದ ವೃತ್ತಿ ಗೌರವಕ್ಕೆ ಧಕ್ಕೆಯುಂಟಾಗುತ್ತಿದ್ದು ನಮ್ಮ ಸಮಾಜ ಜನರು ಸ್ವಾಭಿಮಾನದಿಂದ ಬದುಕಲು ಆಗುತ್ತಿಲ್ಲ. ಸವಿತಾ ಸಮಾಜ ಅತಿ ಹಿಂದುಳಿದ, ಸಣ್ಣ ಸಮಾಜವಾಗಿರುವುದರಿಂದ ಹಾಗೂ ಸಂಘಟಿತರಾಗದೆ ರಾಜಕೀಯ ಬಲವಿಲ್ಲದ್ದರಿಂದ ಹಲವು ಜನನಾಯಕರು ಸಾರ್ವಜನಿಕವಾಗಿ ಈ ಪದವನ್ನು ಬಳಸುತ್ತಿದ್ದಾರೆ. ಇದೇ ರೀತಿ ಹೆಚ್ಚು ಜನಸಂಖ್ಯೆಯುಳ್ಳ ಯಾವುದೇ ಸಮಾಜದ ಮೇಲೆ ಇಂತಹ ಪ್ರಕರಣ ನಡೆದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಆಗುತ್ತಿತ್ತು. ನಾವು ಸಣ್ಣ ಸಮಾಜವಾಗಿರುವುದರಿಂದ ಯಾವುದೇ ರಾಜಕೀಯ ಪಕ್ಷಗಳು ನಮ್ಮ ಪರವಾಗಿ ನಿಲ್ಲುತ್ತಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಲ ವೃತ್ತಿ ಮತ್ತು ಜಾತಿಗಳನ್ನು ಅವಮಾನಿಸುವ ಪದಬಳಕೆಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ಮುತ್ತುರಾಜು, ಗೋಪಿ, ಅನಿಲ್, ವರದರಾಜು, ಕಿರಣ್‌ಕುಮಾರ್, ರಾಮು, ಮಾರುತಿ, ಶ್ರೀಧರ್‌ಬಾಬು, ಪ್ರವೀಣ್ ಮತ್ತಿತರರಿದ್ದರು.ಫೋಟೋ 31-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಹಸೀಲ್ದಾರ್ ಮೋಹನ್‌ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದ ತಾಲೂಕು ಸವಿತಾ ಸಮಾಜದ ಮುಖಂಡರು.;Resize=(128,128))
;Resize=(128,128))
;Resize=(128,128))