ಚಿಕ್ಕಮಗಳೂರುಬಸವಣ್ಣ ಹಾಗೂ ಅವರ ಮಾನವೀಯ, ಸಮಾನತೆಯ ವಿಚಾರಧಾರೆಗೆ ಅವಹೇಳನ ಮಾಡುವ ಪ್ರಯತ್ನಗಳ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿರುವುದನ್ನು ಅಭಿನಂದಿಸಿರುವ ಶ್ರೀ ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕಾನೂನುಬದ್ಧ ಹಾಗೂ ಶಾಶ್ವತ ಕ್ರಮ ಕೈಗೊಳ್ಳುವಂತೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮುಖ್ಯ ಮನವಿಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಸವಣ್ಣ ಹಾಗೂ ಅವರ ಮಾನವೀಯ, ಸಮಾನತೆಯ ವಿಚಾರಧಾರೆಗೆ ಅವಹೇಳನ ಮಾಡುವ ಪ್ರಯತ್ನಗಳ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿರುವುದನ್ನು ಅಭಿನಂದಿಸಿರುವ ಶ್ರೀ ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕಾನೂನುಬದ್ಧ ಹಾಗೂ ಶಾಶ್ವತ ಕ್ರಮ ಕೈಗೊಳ್ಳುವಂತೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.12ನೇ ಶತಮಾನದ ಮಹಾನ್ ಮಾನವತಾವಾದಿ ಬಸವಣ್ಣ ಯಾವುದೇ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೀಮಿತರಲ್ಲ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದ ವಿಶ್ವಗುರು. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ರವಿ ಗಂಜ್ ನೀಡಿರುವುದಾಗಿ ವರದಿಯಾಗಿರುವ ಅವಹೇಳನಕಾರಿ ಹೇಳಿಕೆಗಳು ಹಾಗೂ ''''''''ಬಸವ ಮಂಟಪ'''''''' ಪುಸ್ತಕದ ವಿಚಾರವಾಗಿ ವ್ಯಕ್ತವಾದ ಆಕ್ಷೇಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸುವ ಜೊತೆಗೆ ವಿಮರ್ಶೆ ಹೆಸರಿನಲ್ಲಿ ಆಧಾರರಹಿತ ಆರೋಪ, ವ್ಯಕ್ತಿತ್ವಕ್ಕೆ ಧಕ್ಕೆ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುವ ಕೃತ್ಯವನ್ನು ಸಮರ್ಥಿಸಲಾಗದು. ಈ ಹಿನ್ನೆಲೆಯಲ್ಲಿ ಲಭ್ಯ ದಾಖಲೆಗಳ ಆಧಾರ ದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ, ಕಾನೂನು ಉಲ್ಲಂಘನೆಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.ಬಸವಣ್ಣನವರ ಜೀವನ, ವಚನ ಸಾಹಿತ್ಯ ಮತ್ತು ಸಾಮಾಜಿಕ ಕ್ರಾಂತಿಯ ಅಧ್ಯಯನಕ್ಕೆ ಸಾಹಿತಿಗಳು, ಇತಿಹಾಸಕಾರರು ಹಾಗೂ ಸಂಶೋಧಕರ ತಜ್ಞರ ಸಮಿತಿ ರಚಿಸಬೇಕು. ಶಾಲಾ-ಕಾಲೇಜು ಪಠ್ಯಕ್ರಮದಲ್ಲಿ ಬಸವತತ್ವಕ್ಕೆ ಆದ್ಯತೆ ನೀಡಬೇಕು. ರಾಜ್ಯಾದ್ಯಂತ ವಿಚಾರ ಸಂಕಿರಣ, ಉಪನ್ಯಾಸ, ಸಾಹಿತ್ಯ ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸ ಬೇಕು. ವಿವಾದಾತ್ಮಕ ಕೃತಿಗಳ ಕುರಿತು ಸಂಶೋಧನಾಧಾರಿತ ವಸ್ತುನಿಷ್ಠ ಮಾಹಿತಿ ಒದಗಿಸುವ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.ಮಾಧ್ಯಮಗಳು, ಪ್ರಕಾಶಕರು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಜವಾಬ್ದಾರಿಯುತ ಅಭಿವ್ಯಕ್ತಿಗೆ ಅರಿವು ಮೂಡಿಸಿ, ನಾಡಿನ ಮಹಾನ್ ಶರಣರು ಹಾಗೂ ಸಮಾಜ ಸುಧಾರಕರ ಕುರಿತು ಅವಹೇಳನಕಾರಿ ಹೇಳಿಕೆಗಳಿಂದ ಸಾಮಾಜಿಕ ಸಂಘರ್ಷ ಉಂಟಾಗದಂತೆ ತಡೆಗಟ್ಟಬೇಕು. ಸರ್ಕಾರದ ಕ್ರಮಗಳು ಪಾರದರ್ಶಕವಾಗಿರಬೇಕು ಎಂದು ಆಗ್ರಹಿಸಿದ್ದಾರೆ.ಬಸವಣ್ಣನವರು ಒಂದು ಸಮುದಾಯದ ಆಸ್ತಿಯಲ್ಲ; ಕನ್ನಡ ನಾಡಿನ ಸಾಂಸ್ಕೃತಿಕ ನಾಯಕರು ಹಾಗೂ ಇಡೀ ಮಾನವ ಕುಲದ ಸಾರ್ವಕಾಲಿಕ ಚೇತನ. ಅವರನ್ನು ಜಯಂತಿ, ಉತ್ಸವಗಳಿಗೆ ಸೀಮಿತಗೊಳಿಸದೆ ಅವರ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಆಶಯಗಳನ್ನು ಅನುಸರಿಸಬೇಕು ಎಂದು ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮನವಿಯಲ್ಲಿ ತಿಳಿಸಿದ್ದಾರೆ.
