ಸಾರಾಂಶ
ಬಾಂಗ್ಲಾ ದೇಶದಲ್ಲಿ ಹಿಂದೂಗಳ ವಿರುದ್ಧ ದಾಳಿ ನಿರಂತರವಾಗಿ ನಡೆಯುತ್ತಿದ್ದು ಕೆಲವು ದಿನಗಳ ಹಿಂದೆ ಬಂಧಿತರಾಗಿರುವ ಚಿನ್ಮಯ ಕೃಷ್ಣದಾಸಬ್ರಹ್ಮಚಾರಿ ಪರವಾಗಿ ವಾದಿಸಲು ಯಾವುದೇ ವಕೀಲರು ನ್ಯಾಯಾಲಯಕ್ಕೆ ಬಾರದಿರುವುದರಿಂದ ಅವರ ಜಾಮೀನು ಅರ್ಜಿ ವಿಚಾರಣೆ ಒಂದು ತಿಂಗಳು ಮುಂದೂಡಿರುವುದು ವಿಷಾದನೀಯ.
ಕನ್ನಡಪ್ರಭ ವಾರ್ತೆ ಕೋಲಾರಬಾಂಗ್ಲಾದಲ್ಲಿ ದೌರ್ಜನ್ಯಕ್ಕೆ ಸಿಲುಕಿರುವ ಹಿಂದೂಗಳು ಮತ್ತು ವಕೀಲರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ವಕೀಲರ ಸಂಘದ ಮುಂದೆ ಪ್ರತಿಭಟನೆ ನಡೆಸಿದ ನ್ಯಾಯವಾದಿಗಳು ಎಡಿಸಿ ಮಂಗಳರಿಗೆ ಮನವಿ ಸಲ್ಲಿಸಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ವಿರುದ್ಧ ದಾಳಿ ನಿರಂತರವಾಗಿ ನಡೆಯುತ್ತಿದ್ದು ಕೆಲವು ದಿನಗಳ ಹಿಂದೆ ಬಂಧಿತರಾಗಿರುವ ಚಿನ್ಮಯ ಕೃಷ್ಣದಾಸಬ್ರಹ್ಮಚಾರಿ ಪರವಾಗಿ ವಾದಿಸಲು ಯಾವುದೇ ವಕೀಲರು ನ್ಯಾಯಾಲಯಕ್ಕೆ ಬಾರದಿರುವುದರಿಂದ ಅವರ ಜಾಮೀನು ಅರ್ಜಿ ವಿಚಾರಣೆ ಒಂದು ತಿಂಗಳು ಮುಂದೂಡಲಾಗಿದೆ ಎಂದು ವಿಷಾದಿಸಿದರು. ಹಿಂದೂ ವಕೀಲರ ಮೇಲೆ ಕೇಸ್
ಚಿನ್ಮಯ ದಾಸರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಭಾಗವಹಿಸುವುದನ್ನು ತಡೆಯಲು ಸುಮಾರು ೭೦ ಹಿಂದೂ ವಕೀಲರ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಲಾಗಿದೆ ಎಂದು ಬಾಂಗ್ಲಾ ಸಮ್ಮಿಲಿತ ಜಾಗರಣ್ ಜೋತ್ ಅಳಲು ತೋಡಿಕೊಂಡಿದೆ, ವಕೀಲರು ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಡೆದಿರುವುದು ಸಾಂವಿಧಾನಿಕ ಅಪಚಾರ ಎಂದರು.ಹಿಂದೂ ಸನ್ಮಾಸಿ ಪರ ವಾದಿಸಲು ಮುಂದಾದ ಬಾಂಗ್ಲಾ ವಕೀಲರ ಮೇಲೆ ಅವರ ಮನೆಯಲ್ಲಿ ಇಸ್ಲಾಂ ಮತೀಯವಾದಿಗಳು ಹಲ್ಲೆ ನಡೆಸಿದ್ದು ಗಾಯಾಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಾದರೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವ ಮೂಲಕ ಬಾಂಗ್ಲಾ ದೇಶದಲ್ಲಿರುವ ಹಿಂದೂಗಳಿಗೆ ರಕ್ಷಣೆ ಕೊಡಿಸಬೇಕಾಗಿ ಮನವಿ ಮಾಡಿದರು.ಹಿರಿಯ ವಕೀಲ ಕೆ.ವಿ.ಶಂಕರಪ್ಪ, ವಕೀಲರಾದ ಮಾಗೇರಿ ನಾರಾಯಣಸ್ವಾಮಿ, ಶ್ರೀಧರ್, ಜಯರಾಮ್, ಬಸವರಾಜ್, ಕೆ.ನಟರಾಜ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬೈರಾರೆಡ್ಡಿ, ಉಪಾಧ್ಯಕ್ಷ ರವೀಂದ್ರಬಾಬು ಇದ್ದರು.