ಪರೀಕ್ಷೆ ಅಕ್ರಮ ಶಿಕ್ಷೆಗೆ ಆಗ್ರಹ

| Published : Aug 09 2024, 12:31 AM IST

ಸಾರಾಂಶ

Demand for punishment for examination illegality

ಚಿತ್ರದುರ್ಗ: ದಾವಣಗೆರೆ ವಿವಿ ಅಂತಿಮ ವರ್ಷದ ವಾಣಿಜ್ಯ ವಿಭಾಗದ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಬದಲಿಗೆ ಸ್ಕೀಮ್ ಆಫ್ ವ್ಯಾಲ್ಯುವೇಷನ್ ಪತ್ರಿಕೆ ನೀಡಿದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದು ನ್ಯಾಯ ಒದಗಿಸುವಂತೆ ಎಬಿವಿಪಿ ಆಗ್ರಹಿಸಿದೆ. ಈ ಸಂಬಂಧ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘಟನೆ, ಬೋರ್ಡ್ ಆಫ್ ಎಕ್ಸಾಮಿನೇಷನ್ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಹಾಗಾಗಿ, ಈ ನಿರ್ಲಕ್ಷತೆಗೆ ಕಾರಣ ಅಧಿಕಾರಿಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಎಬಿವಿಪಿ ನಗರ ಕಾರ್ಯದರ್ಶಿ ಗೋಪಿ, ಸಾಮಾಜಿಕ ಜಾಲತಾಣ ಚಿತ್ರಸ್ವಾಮಿ, ಕಾರ್ಯಕರ್ತರಾದ ಸಂಜಯ್, ಸುದೀಪ್, ರೇವಂತ, ಆಕಾಶ್, ಚಂದ್ರಶೇಖರ್, ತಿಪ್ಪೇಶ್, ರಂಗನಾಥ್ ಇತರರು ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.

--------

ಫೋಟೋ: 8 ಸಿಟಿಡಿ 3