ಗುಣಮಟ್ಟದ ಕಾಮಗಾರಿಗಳಿಗೆ ಕರವೇ ಒತ್ತಾಯ

| Published : Jul 20 2024, 12:50 AM IST

ಗುಣಮಟ್ಟದ ಕಾಮಗಾರಿಗಳಿಗೆ ಕರವೇ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣ ಭಾಗ್ಯ ಜಲ ನಿಗಮದ ವತಿಯಿಂದ ಸ್ವೀಕರಿಸಲಾಗಿರುವ ಟೆಂಡರ್ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕೆಂದು ಆಗ್ರಹಿಸಿ ಕರವೇ(ನಾರಾಯಣಗೌಡ) ಬಣದ ವತಿಯಿಂದ ಮಂಜುನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೊಡೇಕಲ್‌

ಕೃಷ್ಣ ಭಾಗ್ಯ ಜಲನಿಗಮಕ್ಕೆ ಸಲ್ಲಿಕೆಯಾಗಿರುವ ಕಾಲುವೆ ಮತ್ತು ಆಣೆಕಟ್ಟು ನಿರ್ವಹಣೆಯ ಕಾಮಗಾರಿಗಳ ಟೆಂಡರ್‌ಗಳನ್ನು ಸೂಕ್ತವಾಗಿ ಪರಿಶೀಲಿಸಿ, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಡೆಸಿ ಕಾಲುವೆ ಕೊನೆ ಭಾಗದ ರೈತರಿಗೆ ಅನೂಕೂಲ ಮಾಡಿಕೊಡಬೇಕೆಂದು ಕರವೇ (ನಾರಾಯಣಗೌಡ) ಬಣದ ಕಾರ್ಯಕರ್ತರು ಕೃಷ್ಣ ಭಾಗ್ಯ ಜಲ ನಿಗಮದ ನಾರಾಯಣಪುರದ ಮುಖ್ಯ ಎಂಜಿನಿಯರ್‌ ಮಂಜುನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರವೇ ವಲಯ ಅಧ್ಯಕ್ಷ ಹಣಮಗೌಡ ಮಾತನಾಡಿ, ಈಗಾಗಲೇ ಪ್ರಸ್ತಕ ಸಾಲಿನ ಕಾಮಗಾರಿಗಳ ಬಗ್ಗೆ ಹಲವು ಗುತ್ತಿಗೆದಾರರಿಂದ ಅರ್ಜಿಗಳು ಕೆಬಿಜೆಎನ್‌ಎಲ್‌ಗೆ ಸಲ್ಲಿಸಿದ್ದು, ಬಹುತೇಕ ಅದರಲ್ಲಿ ಟೆಂಡರ್ ಅನ್ವಯ ಕಿಮೀ ಲೆಕ್ಕದಲ್ಲಿ ಅತೀ ಕಡಿಮೆ ಮೊತ್ತ ಸಲ್ಲಿಸಿ ಟೆಂಡರ್ ಪಡೆದಿದ್ದಾರೆ.

ನಿಯಮಾವಳಿಗಳ ಪ್ರಕಾರ ಅಷ್ಟೊಂದು ಕಡಿಮೆ ಮೊತ್ತಕ್ಕೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಅಸಾಧ್ಯವಾಗಿದ್ದು, ಆದಕಾರಣ ಅಂತವರ ಮೇಲೆ ನಿಗಾವಹಿಸಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕಲ್ಪಿಸಿ, ಕಾಲುವೆಗಳಲ್ಲಿ ಜಂಗಲ್ ಮತ್ತು ಸಿಲ್ಟ್ ಹೆಚ್ಚಿನ ಪ್ರಮಾಣದಲ್ಲಿ ಕೂಡಿರುವುದರಿಂದ ಅವುಗಳನ್ನು ಸ್ವಚ್ಛಗೊಳಿಸಿ ಕೊನೆ ಭಾಗದ ರೈತರಿಗೆ ನೀರು ಹಾಗೂ ಸಂಚರಿಸಲು ಸೂಕ್ತ ದಾರಿ ಮಾಡಿಕೊಡಬೇಕೆಂದು ವಿನಂತಿಸಿದರು.

ಈ ವೇಳೆ ಉಪಾಧ್ಯಕ್ಷರಾದ ಬಸವರಾಜ ಕೊಂಡಗೂಳಿ, ಪ್ರಧಾನ ಕಾರ್ಯದರ್ಶಿ ಮೌಲಾನಿ ಸಯ್ಯದ್, ಸಂಗು ಜಾಲಳ್ಳಿ, ಪರಶು ಬಗಾನಳ್ಳಿ, ಹಣಮಗೌಡ ಪಾಟೀಲ್, ಸಂಜೀವ ಬರದೇವನಾಳ ಸೇರಿದಂತೆ ಇತರರಿದ್ದರು.