ಹಿರೇಕೆರೂರು: ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಹೊಸ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ತಾಲೂಕು ಮಾದರ ಮಹಾಸಭಾ ವತಿಯಿಂದ ಪಟ್ಟಣದಲ್ಲಿ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡ ಬಿ.ಆರ್. ಪುಟ್ಟಣ್ಣನವರ ಮಾತನಾಡಿ, ಒಳಮಿಸಲಾತಿ ಕುರಿತು ಮಾದಿಗ ಸಮುದಾಯ ಸುಮಾರು 40 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಶೇ. 15ರಷ್ಟು ಮೀಸಲಾತಿಗೆ ಒಳಮೀಸಲಾತಿ ಜಾರಿ ಮಾಡಲು ಸಮುದಾಯದ ಒತ್ತಾಯಿಸುತ್ತದೆ. ಈ ಹಿಂದೆ ತೆಗೆದುಕೊಂಡಿರುವ ತೀರ್ಮಾನದಂತೆ ಹಾಗೂ ಸುಪ್ರೀಂ ಕೋರ್ಟಿನ ತೀರ್ಪಿನಂತೆ ತೆಲಂಗಾಣ, ಆಂಧ್ರಪ್ರದೇಶ, ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಜಾರಿ ಮಾಡಿರುವಂತೆ ನಮ್ಮ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸದೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಭರ್ತಿ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಹಾಸಭಾ ಖಂಡಿಸುತ್ತದೆ. ಶಾಸಕರು ಅಧಿವೇಶನದಲ್ಲಿ ಮಹಾಸಭಾದ ಬೇಡಿಕೆ ಮತ್ತು ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸದನದಲ್ಲಿ ಗಮನಕ್ಕೆ ತರುವ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಮಾದಿಗ ಮಹಾಸಭಾದ ವಿವಿಧ ಘಟಕಗಳ ಪದಾಧಿಕಾರಿಗಳಾದ ನಾಗರಾಜ ಭರಮಪ್ಪ ಪುಟ್ಟಣ್ಣನವರ, ಬಸವರಾಜ ಕಾಲ್ವಿಹಳ್ಳಿ, ಮಾಲತೇಶ ಹೊಲಬಿಕೊಂಡ, ಮಾದೇವಪ್ಪ ಮಾಳಮ್ಮನವರ, ಚಂದ್ರಪ್ಪ ಬಾಲಣ್ಣನವರ, ಶಿವಾಜಿ ದೊಡ್ಡಮನಿ, ಪ್ರಶಾಂತ ತಿರಕಪ್ಪನವರ, ಹನುಮಂತ ಗಾಜೇರ, ದುರಗೇಶ ತಿರಕಪ್ಪನವರ, ಮಾಲತೇಶ ಬಿಲ್ಲಳ್ಳಿ, ಮಾಲತೇಶ ಬೇಟಕೆರೂರ, ಶಂಕರ ತಿರಕಪ್ಪನವರ, ಪರಶುರಾಮ ಚನ್ನಳ್ಳಿ, ಗೋವಿಂದಪ್ಪ ಪುಟ್ಟಣ್ಣನವರ, ಬಸವರಾಜ ದ್ಯಾನಳ್ಳಿ, ನಾಗರಾಜ ಮೆದೂರ, ಗೊಣೆಪ್ಪ ಕೋಡ, ಮಲ್ಲೇಶಣ್ಣ ಬಸರಿಹಳ್ಳಿ, ಕುಮಾರ ದ್ಯಾವಣ್ಣನವರ, ನಾಗರಾಜ ಹಿರೇಮೊರಬ, ಶೇಖರ ನಡುವಿನಮನಿ, ನೀಲಪ್ಪ ತೀರಕಪ್ಪನವರ, ಮಂಜು ಚಿಕ್ಕೋಣತಿ, ಮಾಲತೇಶ ತಿರಕಪ್ಪನವರ, ರಾಜು ಕಳಗೊಂಡ ಹಾಗೂ ಸಮುದಾಯದವರು ಇದ್ದರು.