ಸಣ್ಣ ಗುತ್ತಿಗೆದಾರರ ಕಾಮಗಾರಿ ಹಣ ಬಿಡುಗಡೆಗೆ ಆಗ್ರಹ

| Published : Mar 22 2024, 01:00 AM IST

ಸಣ್ಣ ಗುತ್ತಿಗೆದಾರರ ಕಾಮಗಾರಿ ಹಣ ಬಿಡುಗಡೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ವೇಳೆ ಸರ್ಕಾರ ಬೇಗ ಬಿಲ್ ಪಾವತಿ ಮಾಡದಿದ್ದರೆ ನಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ಸರ್ಕಾರಕ್ಕೆ ಎಚ್ಚರಿಕೆ

ನರಗುಂದ: ತಾಲೂಕಿನಲ್ಲಿ ಸಣ್ಣ ಗುತ್ತಿಗೆದಾರರು ವಿವಿಧ ಇಲಾಖೆಯಲ್ಲಿ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿದ್ದು, ಸರ್ಕಾರ ಕಾಮಗಾರಿ ಹಣ ಬಿಡುಗಡೆ ಮಾಡದ ಹಿನ್ನೆಲೆ ನಾವೆಲ್ಲ ಕಷ್ಟದಲ್ಲಿದ್ದೇವೆ. ಸರ್ಕಾರ ಬೇಗ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ನಾವು ವಿಷ ಸೇವಿಸಬೇಕಾದೀತು ಎಂದು ಸಣ್ಣ ಗುತ್ತಿಗೆದಾರರ ಮುಖಂಡ ಪರಪ್ಪ ಸಹಕಾರ ಎಚ್ಚರಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023-24 ನೇ ಸಾಲಿನಲ್ಲಿ ಜಿಪಂ ಇಲಾಖೆಯಲ್ಲಿ ₹10 ಕೋಟಿ, ನೀರಾವರಿ ಇಲಾಖೆಯಲ್ಲಿ ₹10 ಕೋಟಿ ಹಾಕಿ ವಿವಿಧ ಕಾಮಗಾರಿ ಮಾಡಿದ್ದೇವೆ. ಆದರೆ ಮಾರ್ಚ ಮುಗಿಯುತ್ತಾ ಬಂದರೂ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ನಾವು ಕಷ್ಟದಲ್ಲಿದ್ದೇವೆ. ಈಗಾಗಲೇ ಹಲವಾರು ಬಾರಿ ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರ ಬೇಗ ಎಚ್ಚೆತ್ತುಕೊಂಡು ಬಿಲ್ ಪಾವತಿ ಮಾಡಬೇಕು, ಒಂದು ವೇಳೆ ಸರ್ಕಾರ ಬೇಗ ಬಿಲ್ ಪಾವತಿ ಮಾಡದಿದ್ದರೆ ನಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಣ್ಣ ಗುತ್ತಿಗೆದಾರರಾದ ಸುರೇಶ ಹುಡೇದಮನಿ, ಬಸನಗೌಡ ಪಾಟೀಲ, ರಾಜು ಪಾಟೀಲ, ಭೀಮಶಿ ಯಾವಗಲ್, ಶಶಿ ನೆಗಳೂರ, ಗೋಪಾಲ ಹೊರಕೇರಿ, ಹನಮಂತಗೌಡ ಪಾಟೀಲ, ಈರನಗೌಡ ಬೆಳ್ಳೇರಿ, ರಮೇಶ ಕಾಳೆ, ಪ್ರವೀಣ ಯಲಿಗಾರ, ಶಿವು ಚಲವಾದಿ, ವೀರಣ್ಣ ಹೊಂಗಲ, ಬೀರಪ್ಪ ಕಲಹಾಳ, ಸೋಮು ಹೊಂಗಲ, ನವೀನ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.