ಸಾರಾಂಶ
ಚಿಂಚೋಳಿ ಪಟ್ಟಣದ ಹೊರವಲಯದ ಮುಲ್ಲಾಮಾರಿ ನದಿ ಸೇತುವೆಯಿಂದ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಸಾಕಷ್ಟು ತೆಗ್ಗುಗಳು ಬಿದ್ದಿರುವುದರಿಂದ ವಾಹನಗಳ ಸವಾರರ ಜೀವಕ್ಕೆ ಅಪಾಯವಾಗುತ್ತಿವೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಹೊರವಲಯದ ಮುಲ್ಲಾಮಾರಿ ನದಿ ಸೇತುವೆಯಿಂದ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಸಾಕಷ್ಟು ತೆಗ್ಗುಗಳು ಬಿದ್ದಿರುವುದರಿಂದ ವಾಹನಗಳ ಸವಾರರ ಜೀವಕ್ಕೆ ಅಪಾಯವಾಗುತ್ತಿವೆ. ಅಪಾಯಮಟ್ಟದ ರಸ್ತೆಯಲ್ಲಿರುವ ತೆಗ್ಗುಗಳನ್ನು ಕೂಡಲೇ ದುರಸ್ತಿಗೊಳಿಸಿ ಅಪಘಾತಗಳನ್ನು ತಡೆಯಬೇಕೆಂದು ಬಿಜೆಪಿ ಹಿರಿಯ ಮುಖಂಡ ಕೆ.ಎಂ. ಬಾರಿ ಒತ್ತಾಯಿಸಿದ್ದಾರೆ.ಅವರು ಚಿಂಚೋಳಿ ಪಟ್ಟಣದ ಹೊರವಲಯದ ಸೇತುವೆ ಬಳಿ ರಸ್ತೆ ಅಪಾಯಕಾರಿ ಇರುವ ಸ್ಥಳವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಬರುವ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ತೆಗ್ಗು ಬಿದ್ದಿವೆ. ಇಗ ಮಳೆಗಾಲದಲ್ಲಿ ಅಪಾಯಕಾರಿ ತೆಗ್ಗುಗಳು ವಾಹನಗಳ ಸವಾರರಿಗೆ ಗೊತ್ತಾಗುತ್ತಿಲ್ಲ ರಾತ್ರಿ ಮತ್ತು ಹಗಲಿನಲ್ಲಿ ಸಂಚರಿಸುವ ಬೈಕ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂತಹ ಅಪಾಯಕಾರಿ ಸ್ಥಳಗಳನ್ನು ಪರಿಶೀಲಿಸಿ ದುರಸ್ತಿಕಾರ್ಯ ನಡೆಸಲಿಲ್ಲವೆಂದು ಆಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ ಈಗಿನ ಸರಕಾರದಲ್ಲಿ ರಸ್ತೆ ಅಭಿವೃದ್ಧಿಗಳ ನಡೆಯುತ್ತಿಲ್ಲ ಚಿಮ್ಮಾಇದಲಾಯಿ, ಕೊಡ್ಲಿ, ರುಮ್ಮನಗೂಡ, ಐನಾಪೂರ, ಸಲಗರಬಸಂತಪೂರ, ಸಾಲೇಬೀರನಳ್ಳಿ, ರಸ್ತೆಗಳಲ್ಲಿ ಸಂಚರಿಸಲು ತೊಂದರೆ ಆಗುತ್ತಿದೆ ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಹರಿಸಿ ಮುಲ್ಲಾಮಾರಿ ಸೇತುವೆ ಬಳಿ ಇರುವ ರಸ್ತೆ ದುರಸ್ತಿಕಾರ್ಯ ನಡೆಸಬೇಕು ಇಲ್ಲದಿದ್ದರೆ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.