ಸಾರಾಂಶ
ಬೆಂಗಳೂರಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನಡೆದ ಮತೀಯ ಅಲ್ಪಸಂಖ್ಯಾತರ ಪ್ರತಿನಿಧಿಗಳ ಬಜೆಟ್ ಮುನ್ನಾ ಸಮಾಲೋಚನಾ ಸಭೆಯಲ್ಲಿ ಈ ಮನವಿ
ಕನ್ನಡಪ್ರಭ ವಾರ್ತೆ ಮೈಸೂರು
ಜೈನ ಅಭಿವೃದ್ಧಿ ನಿಗಮ ಸ್ಥಾಪನೆ, ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ 50 ಕೋಟಿ ಅನುದಾನ, ಜೈನರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರಾತಿ ಇತ್ಯಾದಿ ಬೇಡಿಕೆಗಳ ಮನವಿಯನ್ನು ಜೈನ ಮುಖಂಡರು ವಸತಿ, ಅಲ್ಪಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಲ್ಲಿಸಿದ್ದಾರೆ.ಬೆಂಗಳೂರಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನಡೆದ ಮತೀಯ ಅಲ್ಪಸಂಖ್ಯಾತರ ಪ್ರತಿನಿಧಿಗಳ ಬಜೆಟ್ ಮುನ್ನಾ ಸಮಾಲೋಚನಾ ಸಭೆಯಲ್ಲಿ ಈ ಮನವಿಯನ್ನು ಸಚಿವರಿಗೆ ನೀಡಿದ್ದಾರೆ. ಈ ವೇಳೆ ಜೀತೊ ಮೈಸೂರು ವಲಯದ ಅಧ್ಯಕ್ಷ ವಿನೋದ್ ಬಾಕ್ಲಿವಾಲ್, ಅಲ್ಪಸಂಖ್ಯಾತ ಘಟಕದ ಸಂಚಾಲಕ ಸುರೇಶ್ ಕುಮಾರ್ ಜೈನ್, ಕರ್ನಾಟಕ ಜೈನ ಅಸೋಸಿಯೇಷನ್ ಉಪಾಧ್ಯಕ್ಷರಾದ ರಾಜ್ ಕೀರ್ತಿ, ಶೀತಲ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಆಶಾ ಪ್ರಭು, ಸದಸ್ಯರಾದ ಪ್ರಕಾಶ್, ಉತ್ತಮ ಪಾಟೀಲ್, ಕರ್ನಾಟಕ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಅರುಣ್ ಯಲಗುದ್ರಿ, ಸದಸ್ಯ ಉತ್ತಮ್ ಪಾಟೀಲ್ ಮೊದಲಾದವರು ಇದ್ದರು.