ನಿಗಮ, ಮಂಡಳಿಗಳಲ್ಲಿ ಎಸ್ಸಿ ಪ್ರಾತಿನಿಧ್ಯಕ್ಕೆ ಆಗ್ರಹ: ಆರ್‌. ಧರ್ಮಸೇನ

| Published : Oct 17 2025, 01:03 AM IST

ನಿಗಮ, ಮಂಡಳಿಗಳಲ್ಲಿ ಎಸ್ಸಿ ಪ್ರಾತಿನಿಧ್ಯಕ್ಕೆ ಆಗ್ರಹ: ಆರ್‌. ಧರ್ಮಸೇನ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ನಿಗಮ, ಮಂಡಳಿಗಳಿಗೆ ನೇಮಕ ಮಾಡುವಾಗ ರಾಜ್ಯದ ಪರಿಶಿಷ್ಟ ಜಾತಿಯವರಿಗೆ ಸರಿಯಾದ ಪ್ರಾತಿನಿದ್ಯತೆ ನೀಡಲಾಗಿಲ್ಲ ಎಂದು ಜಿಲ್ಲಾ ಮಟ್ಟದಿಂದ ದೂರುಗಳು ಬಂದಿವೆ. ಆದ್ದರಿಂದ ಇದನ್ನು ಸರಿಪಡಿಸಲು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ ಹೇಳಿದ್ದಾರೆ.

ಉಡುಪಿ: ರಾಜ್ಯ ಸರ್ಕಾರ ಇತ್ತೀಚೆಗೆ ನಿಗಮ, ಮಂಡಳಿಗಳಿಗೆ ನೇಮಕ ಮಾಡುವಾಗ ರಾಜ್ಯದ ಪರಿಶಿಷ್ಟ ಜಾತಿಯವರಿಗೆ ಸರಿಯಾದ ಪ್ರಾತಿನಿದ್ಯತೆ ನೀಡಲಾಗಿಲ್ಲ ಎಂದು ಜಿಲ್ಲಾ ಮಟ್ಟದಿಂದ ದೂರುಗಳು ಬಂದಿವೆ. ಆದ್ದರಿಂದ ಇದನ್ನು ಸರಿಪಡಿಸಲು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ ಹೇಳಿದ್ದಾರೆ.

ಅವರು ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಮುಜರಾಯಿ, ಕಂದಾಯ ಮತ್ತಿತರ ಇಲಾಖೆಗಳ ವಿವಿಧ ಸಮಿತಿಗಳಲ್ಲಿಯೂ ಪರಿಶಿಷ್ಟ ಜಾತಿಯವರಿಗೆ ಪ್ರಾತಿನಿಧ್ಯತೆ ನೀಡಬೇಕು, ಪಕ್ಷದ ಸಂಘಟನೆಯಲ್ಲಿ ಪರಿಶಿಷ್ಟ ಜಾತಿಯವರ ಕೊಡುಗೆಯನ್ನು ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಸನಾತನಿ ಮತ್ತು ಆರ್‌ಎಸ್‌ಎಸ್‌ ಹಾವಳಿ ಆರಂಭವಾಗಿದೆ ಎಂದು ಆರೋಪಿಸಿದ ಅವರು, ಸುಪ್ರೀಂ ಕೋರ್ಟ್ ಪ್ರಧಾನ ನ್ಯಾಯಾದೀಶ ಬಿ. ಆರ್. ಗವಾಯಿ ಅವರು ದಲಿತರು ಎಂಬ ಕಾರಣಕ್ಕೆ ಶೂ ದಾಳಿ ನಡೆಸಲಾಗಿದೆ. ದೇಶದಲ್ಲಿ ದಲಿತರ ಮೇಲೆ ದಾಳಿನಡೆಸಿದರೇ ಪರವಾಗಿಲ್ಲ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಈ ದಾಳಿ ನಡೆಸಿದ ವಕೀಲರನ್ನು ಕೇವಲ ಅಮಾನತುಗೊಳಿಸಲಾಗಿದೆ, ಇದು ಪರಿಹಾರವಲ್ಲ, ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಜಯಕುಮಾರ್, ರಾಜ್ಯ ಸಂಚಾಲಕರಾದ ಕೇಶವವ್ ಮತ್ತು ಪ್ರತಿಮಾ, ಬೈಂದೂರು ಎಲ್‌ಡಿಎಂ ಸದಸ್ಯ ಜಗದೀಶ್ ಗಂಗೊಳ್ಳಿ ಮುಂತಾದವರಿದ್ದರು.