ಸಿದ್ದಿ ಸಮುದಾಯಕ್ಕೆ ವಿಶೇಷ ಅನುದಾನಕ್ಕಾಗಿ ಒತ್ತಾಯ

| Published : May 24 2025, 12:36 AM IST

ಸಾರಾಂಶ

ಸಿದ್ದಿ ಸಮುದಾಯಕ್ಕೆ ವಿಶೇಷ ಅನುದಾನಕ್ಕಾಗಿ ಮನವಿ ಸಲ್ಲಿಸಲಾಯಿತು.

ಯಲ್ಲಾಪುರ: ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಈ ಜನಾಂಗದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಯಲ್ಲಾಪುರದ ರಾಜ್ಯ ಸಿದ್ದಿ ಜನಸೇವಾ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.ಸಮುದಾಯಕ್ಕೆ ವಾಸದ ಮನೆ ನಿರ್ಮಾಣಕ್ಕೆ ಮತ್ತು ಕುಡಿಯುವ ನೀರು ಸವಲತ್ತಿಗಾಗಿ ₹೫೦ ಕೊಟಿ ಮಂಜೂರು ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಈಗಾಗಲೆ ಬಜೆಟ್‌ನಲ್ಲಿ ₹೨೦೦ ಕೊಟಿ ಪರಿಶಿಷ್ಟ ಪಂಗಡದವರಿಗೆ ಮೀಸಲಿಡಲಾಗಿದೆ. ಸಿದ್ದಿ ಸಮುದಾಯದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಹೈಕೋರ್ಟ್‌ ವಕೀಲ ಜಯರಾಮ್ ಸಿದ್ದಿ ನೇತೃತ್ವದಲ್ಲಿ ತೆರಳಿದ ನಿಯೋಗದಲ್ಲಿ ಜನಸೇವಾ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ಸಿದ್ದಿ, ಜಿಲ್ಲಾ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯ ಸುರೇಶ ಸಿದ್ದಿ ನಂದೊಳ್ಳಿ, ಜಿಲ್ಲಾ ಅಲೆಮಾರಿ ಸಮಿತಿಯ ಎಸ್ಟಿ ಸದಸ್ಯ ಗಣಪತಿ ಸಿದ್ದಿ ಕೊಡಸೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಯೊಗೇಶ್, ಸಮುದಾಯದ ಪ್ರಮುಖರಾದ ಸುರೇಶ ಸಿದ್ದಿ, ಪ್ರಾನ್ಸಿಸ್ ಸಿದ್ದಿ, ಶಂಕರ ಸಿದ್ದಿ ಹಾಸಣಗಿ, ಸಂತೋಷ ಸಿದ್ದಿ ಹೊಟ್ಕೆರೆ, ಚಂದ್ರಾ ಸಿದ್ದಿ ಹರಿಗದ್ದೆ, ನಾರಾಯಣ ಸಿದ್ದಿ ಕೋಟೆಮನೆ, ಮಂಜುನಾಥ ಕೆ.ಸಿದ್ದಿ ಅಣಲಗಾರ್, ಗಣೇಶ್ ಸಿದ್ದಿ ಮಾಗೊಡ, ಪ್ರಕಾಶ್ ಸಿದ್ದಿ ಶಿರಲೆ, ಅಲ್ವಿನ್ ಸಿದ್ದಿ ಯಲ್ಲಾಪುರ ಉಪಸ್ಥಿತರಿದ್ದರು.

ಸಿದ್ದಿ ಸಮುದಾಯಕ್ಕೆ ವಿಶೇಷ ಅನುದಾನಕ್ಕಾಗಿ ಮನವಿ ಸಲ್ಲಿಸಲಾಯಿತು.