ವಿದ್ಯಾರ್ಥಿನಿಯರನ್ನ ಪಾರ್ಟಿಗೆ ಕರೆದೊಯ್ದ ವಾರ್ಡನ್‌ ಅಮಾನತಿಗೆ ಆಗ್ರಹ

| Published : Aug 09 2025, 12:06 AM IST

ವಿದ್ಯಾರ್ಥಿನಿಯರನ್ನ ಪಾರ್ಟಿಗೆ ಕರೆದೊಯ್ದ ವಾರ್ಡನ್‌ ಅಮಾನತಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಿಯಮಾವಳಿ ಮೀರಿ ವಿದ್ಯಾರ್ಥಿನಿಯರನ್ನು ಜನ್ಮದಿನದ ಔತಣಕೂಟಕ್ಕೆ ಕರೆದುಕೊಂಡ ಹೋದ ವೃತ್ತಿಪರ ಬಾಲಕಿಯರ ವಸತಿ ನಿಲಯದ ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಿಯಮಾವಳಿ ಮೀರಿ ವಿದ್ಯಾರ್ಥಿನಿಯರನ್ನು ಜನ್ಮದಿನದ ಔತಣಕೂಟಕ್ಕೆ ಕರೆದುಕೊಂಡ ಹೋದ ವೃತ್ತಿಪರ ಬಾಲಕಿಯರ ವಸತಿ ನಿಲಯದ ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಜನ್ಮದಿನದ ಪ್ರಯುಕ್ತ ಔತಣಕೂಟಕ್ಕೆ ಕರೆದುಕೊಂಡು ಹೋಗಿರುವ ವಾರ್ಡನ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಮಾತನಾಡಿ, ಬಡ ಪ್ರತಿಭಾವಂತ ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬುವ ಹಂಬಲದೊಂದಿಗೆ ವಸತಿ ನಿಲಯಗಳಲ್ಲಿ ಇದ್ದು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ವಸತಿ ನಿಲಯಗಳನ್ನು ನೋಡಿಕೊಳ್ಳುವ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿ ಈ ರೀತಿಯ ವರ್ತನೆ ಸರಿಯಾದ್ದಲ್ಲ. ರಿಜ್ವಾನ್ ಮುಲ್ಲಾ ಇಂಡಿ ವಸತಿ ನಿಲಯದಲ್ಲಿಯೂ ಸಹಿತ ಇದೆ ರೀತಿಯ ವರ್ತನೆಯಿಂದ ಅಮಾನತಾಗಿದ್ದರು. ಆದರೂ ಬುದ್ದಿ ಕಲಿಯದೆ ಮತ್ತೆ ಅದೇ ಚಾಳಿ ಮುಂದುವರಿಸಿರುವ ರಿಜ್ವಾನ್ ಮುಲ್ಲಾ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ನಗರ ಸಂಘಟನಾ ಕಾರ್ಯದರ್ಶಿ ಶಶಿಕಾಂತ ರಾಕಲೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಐಶ್ವರ್ಯ ಆಸಂಗಿ, ಸ್ನೇಹ ಹಿರೇಮಠ, ಪ್ರವೀಣ ಬಿರಾದಾರ, ನಗರ ತಾಂತ್ರಿಕ ಪ್ರಮುಖರಾದ ಚೇತನ ಕೊರವಾರ, ದಾನಮ್ಮ ಹೊಸಮನಿ, ಸುನೀಲ ರಾಠೋಡ, ಬಾಲಾಜಿ ಬಿರಾದಾರ, ಗಣೇಶ್, ಪ್ರಜ್ವಲ್, ಮನೋಜ್, ಲಕ್ಷ್ಮೀ, ಸಾಕ್ಷಿ, ಪ್ರತೀಕ್ಷಾ ಮುಂತಾದವರು ಪಾಲ್ಗೊಂಡಿದ್ದರು.