ರೈತಪರ ಬೇಡಿಕೆಗಳ ಈಡೆರಿಕೆಗೆ ಆಗ್ರಹ

| Published : Jun 19 2024, 01:02 AM IST

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಲು ಗುಣಮಟ್ಟದ ಬೀಜ ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಬೇಕು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಲು ಗುಣಮಟ್ಟದ ಬೀಜ ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಬೇಕು ಎಂಬ ಇತ್ಯಾಧಿ ಬೇಡಿಕೆ ಈಡೆರಿಕೆಗಾಗಿ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

2024ನೇ ಸಾಲಿನ ಮುಂಗಾರು ಆರಂಭವಾಗಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ಕೃಷಿ ಪರಿಕರಗಳು ನೀಡಬೇಕು. ಖಾಸಗಿ ಆಗ್ರೋ ಕೇಂದ್ರಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಳ ಬೆಲೆಗೆ ಮಾರಟ ಮಾಡುತ್ತಿದ್ದು, ಅಂತಹವರ ವಿರುದ್ಧ ಕೃಷಿ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು. ಕಳೆದ ಸಾಲಿನಲ್ಲಿ ರೈತರು ಬರಗಾಲದಿಂದ ಸಂಕಷ್ಟಕ್ಕಿಡಾಗಿದ್ದಾರೆ. ಹಲವಾರು ರೈತರಿಗೆ ಬೆಳೆ ಪರಿಹಾರ ಜಮೆ ಯಾಗಿದ್ದು, ಬಹುತೇಕ ರೈತರ ಖಾತೆಗೆ ಪರಿಹಾರ ಹಣ ಸಂದಾಯವಾಗಬೇಕಾಗಿದೆ. ಕೂಡಲೆ ಇನ್ನೂಳಿದ ರೈತರ ಪರಿಹಾರ ಕಲ್ಪಿಸಬೇಕು. ರೈತರಿಗೆ 8 ತಾಸು ವಿದ್ಯುತ್ ನೀಡಬೇಕು. ಎಂಬ ಇತ್ಯಾದಿ ಬೇಡಿಕೆಗಳಿಗೆ ಒತ್ತಾಯಿಸಿದರು.

ಪ್ರತಿಭಟನೆಗೂ ಮುನ್ನ ಹಳೆ ತಹಸೀಲ್ದಾರ ಕಚೇರಿಯಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಹೇಶಗೌಡ ಸುಬೇದಾರ, ಗುಳಪ್ಪಗೌಡ ಪಾಟೀಲ್, ಮಲ್ಲಿಕಾರ್ಜುನ ಬಿರಾದಾರ, ಪಂಚಯ್ಯಸ್ವಾಮಿ ಹಿರೇಮಠ, ಭಾಗಣ್ಣ ಸಗರ, ಸಂಗೀತಾ ಕಲ್ಲೂರ, ಪರಮೇಶ ಬಿರಾಳ, ಪರಶುರಾಮ ಯಾಳವಾರ, ರಾಕೇಶಗೌಡ ಪಾಟೀಲ್, ದೇವಿಂದ್ರಪ್ಪಗೌಡ ಪಾಟೀಲ್, ಚಂದನಗೌಡ ಮಾಲಿಪಾಟೀಲ್, ನಾಗರಾಜ ಬಡಿಗೇರ, ಮಲ್ಲಿಕಾರ್ಜುನ ಬಿರಾಳ, ಮಲ್ಲಣ್ಣ ಇಬ್ರಾಹಿಂಪೂರ, ಗೌಸ್ ಶಹಾಪುರ, ನಾಗಾರ್ಜುನ ರಡ್ಡಿ, ಭೀಮರಾಯ ಜನಿವಾರ, ಜಯಶ್ರೀ ಜವಳಗಿ, ಈರಮ್ಮಗೌಡತ್ತಿ ಇಜೇರಿ ಸೇರಿದಂತೆ ನೂರಾರು ಜನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.