ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಾಯಣವನ್ನು ಬರೆದಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಸ್ಥಾಪನೆ ಮಾಡಬೇಕು ಎಂದು ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೇಗಾರ ಕೇಂದ್ರ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್‌ನ್ನು ಒತ್ತಾಯಿಸಿದ್ದಾರೆ.ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ರಾಮಾಯಣವನ್ನು ಬರೆಯುವ ಮೂಲಕ ಈ ದೇಶಕ್ಕೆ ಹಾಗೂ ವಿಶ್ವಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿರುವ ವಾಲ್ಮೀಕಿ ಕವಿಯ ಪುತ್ಥಳಿಯನ್ನು ಅಯೋಧ್ಯೆ ಶ್ರೀರಾಮ ಮಂದಿರದ ಆವರಣದಲ್ಲಿ ನಿರ್ಮಾಣ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಒಂದು ವೇಳೆ ರಾಮಾಯಣ ಬರೆಯದೆ ಇದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ರಾಮನ ಹೆಸರಿನ ಮೂಲಕವೇ ನಾವೆಲ್ಲ ಒಂದಾಗಿದ್ದು ಆ ರಾಮನ ಹೆಸರನ್ನು ವಿಶ್ವಕ್ಕೆ ಪರಿಚಯಿಸಿ ಕವಿ ವಾಲ್ಮೀಕಿಯಾಗಿದ್ದಾರೆ. ಆದ್ದರಿಂದ ಕಾರ್ಯವನ್ನು ಬೇಗನೇ ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ ಬಳ್ಳಾರಿ ಅಥವಾ ಮೈಸೂರು ಭಾಗದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸುವಂತೆ ಸಹ ಅವರು ಒತ್ತಾಯಿಸಿದರು. ಈ ವೇಳೆ ರಾಜಾ ನಾಯಕ, ಮುಖಂಡರಾದ ರಾಜಣ್ಣ, ರಂಗನಾಥ್ ನಾಯಕ, ವಾಲ್ಮೀಕಿ ನಾಯಕ ಮಹಾಸಭಾ ಯೋಗದ ಅಧ್ಯಕ್ಷ ಓಂಕಾರ ನಾಯಕ, ಅನಂತಯ್ಯ, ಶಿವಕುಮಾರ್. ಮುಂತಾದವರು ಹಾಜರಿದ್ದರು.