ಶಿರಹಟ್ಟಿ: ಬೀದರ್ ಜಿಲ್ಲೆ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ ೧೨ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವ ಕುರಿತು ಇತಿಹಾಸ ಸಾರುತ್ತದೆ. ಅಲ್ಲಿನ ಹಡಪದ ಅಪ್ಪಣ್ಣನವರ ಮೂರ್ತಿ ತೆಗೆದು ಪ್ರಸ್ತುತ ಬೇರೆ ಶರಣ-ಶರಣೆಯರ ಮೂರ್ತಿಯನ್ನು ಕಾನೂನುಬಾಹಿರವಾಗಿ ಸ್ಥಾಪಿಸಿದ್ದು, ಪುನಃ ಹಡಪದ ಅಪ್ಪಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಮಂಗಳವಾರ ಸಮುದಾಯದ ಮುಖಂಡರು ತಹಸೀಲ್ದಾರ್ ಆವರಣದಲ್ಲಿ ಸೇರಿ ಗ್ರೇಡ್- ೨ ತಹಸೀಲ್ದಾರ್ ವಿ.ಎ. ಮುಳಗುಂದಮಠ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಹಡಪದ ಅಪ್ಪಣ್ಣ ಸಮಾಜದ ಕಾರ್ಯದರ್ಶಿ ಯಲ್ಲಪ್ಪ ಮಾಗಡಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಅರಿವಿನ ಗವಿಯು ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿಯೇ ಇರುವ ಐತಿಹಾಸಿಕ ಸ್ಥಳವಾಗಿದ್ದು, ಅದಕ್ಕೆ ವಿಶೇಷ ಮಹತ್ವವಿದೆ ಎಂದರು. ಕೂಡಲೇ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹಡಪದ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ಹಡಪದ, ರಮೇಶ ಮಾಗಡಿ, ಮಂಜುನಾಥ ನಾವ್ಹಿ, ಶ್ರೀಕಾಂತ ಹಡಪದ, ಎಸ್.ಜಿ. ಹಡಪದ, ವಿರುಪಾಕ್ಷಪ್ಪ ನಾವ್ಹಿ, ಮಹಾದೇವಪ್ಪ ನಾವ್ಹಿ, ಪ್ರಕಾಶ ನಾವ್ಹಿ, ರೇಣುಕಾ ನಾವ್ಹಿ, ಸರೋಜಾ ನಾವ್ಹಿ, ಕೆ.ಡಿ. ನಾವ್ಹಿ, ಎಲ್.ಎಸ್. ಹಡಪದ, ಮಲ್ಲಿಕಾರ್ಜುನ ಹಡಪದ, ಹಂಪಣ್ಣ ನಾವ್ಹಿ, ಸುಭಾಸ ಹಡಪದ, ಬಿ.ಸಿ. ನಾವ್ಹಿ, ಚನ್ನವೀರಪ್ಪ ನಾವ್ಹಿ, ರಮೆಶ ಮಾಗಡಿ, ಎಂ.ವ್ಹಿ. ನಾವಿ, ಲಲಿತಾ ಡಂಬಳ, ದಯಾನಂದ ಹಡಪದ, ನಾಗಪ್ಪ ಹಡಪದ, ಈರಪ್ಪ ಕ್ಷೌರದ, ರಾಜಶೇಖರ ನಾವ್ಹಿ, ಮಹೇಶ ನಾವ್ಹಿ, ಮುದಕಪ್ಪ ಹಡಪದ, ಚಂದ್ರಶೇಖರ ಹಡಪದ ಇತರರು ಇದ್ದರು.