ಸಾರಾಂಶ
ಹಳೇ ಮಂಡಗದ್ದೆ ರಸ್ತೆಯಲ್ಲಿ ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಶಾಸಕರಿಗೆ ಮನವಿ ಪತ್ರ ನೀಡಿ ಸಂಬಂಧಪಟ್ಟವರಿಗೆ ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡಬೇಕು ಎಂದು ವರ್ತಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ಒತ್ತಾಯಿಸಿದರು.
- ವಾಸವಿ ಸಮುದಾಯ ಭವನದಲ್ಲಿ ವರ್ತಕರ ಸರ್ವ ಸದಸ್ಯರ ಸಭೆಯಲ್ಲಿ ಸತ್ಯನಾರಾಯಣ ಶ್ರೇಷ್ಠಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ಬರುವ ಹಳೇ ಮಂಡಗದ್ದೆ ರಸ್ತೆ ಇಕ್ಕಟ್ಟಾಗಿದ್ದು ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡಬೇಕು ಎಂದು ವರ್ತಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ಸರ್ಕಾರವನ್ನು ಒತ್ತಾಯಿಸಿದರು.
ಭಾನುವಾರ ವಾಸವಿ ಸಮುದಾಯ ಭವನದಲ್ಲಿ ವರ್ತಕರ ಸಂಘದ ಸರ್ವ ಸದಸ್ಯರ ಸಭೆ ಹಾಗೂ 2004 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳೇ ಮಂಡಗದ್ದೆ ರಸ್ತೆಯಲ್ಲಿ ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಶಾಸಕರಿಗೆ ಮನವಿ ಪತ್ರ ನೀಡಿ ಸಂಬಂಧಪಟ್ಟವರಿಗೆ ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದೇವೆ. ಈ ಬಗ್ಗೆ ಮುಂದಿನ ದಿನಗಳಲ್ಲೂ ವರ್ತಕರ ಸಂಘದ ಪ್ರಯತ್ನ ಮುಂದುವರಿಯಲಿದೆ. ಪಟ್ಟಣದಲ್ಲಿ ವರ್ತಕರ ಭವನ ನಿರ್ಮಿಸಬೇಕಾಗಿದ್ದು ಇದಕ್ಕಾಗಿ ನಿವೇಶನ ಖರೀದಿ ಮಾಡಬೇಕು. ಈ ಹಿಂದಿನಂತೆ ತಾಲೂಕು ಕಚೇರಿಯನ್ನು ಪಟ್ಟಣಕ್ಕೆ ವರ್ಗಾಯಿಸಬೇಕಾಗಿದೆ. ಶಾಸಕರಿಗೂ ಮನವಿ ಪತ್ರ ಅರ್ಪಿಸಿದ್ದೇವೆ. ಮುಂದಿನ ದಿನಗಳಲ್ಲೂ ವರ್ತಕರ ಸಂಘದಿಂದ ಹೋರಾಟ ಮಾಡಬೇಕಾಗಿದೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಡಿ.ವೆಂಕಟೇಶ್, ಜಹುರುಲ್ಲಾ ಹುಸೇನಿ ಮತ್ತಿತರರು ಇದ್ದರು.ಸಂಘದ ಕಾರ್ಯದರ್ಶಿ ಮಥಾಯಿ ಮಾತನಾಡಿದರು. ಸಂಘದ ಖಜಾಂಚಿ ವಾಸಪ್ಪ ಗೌಡ ವರದಿ ವಾಚಿಸಿದರು. ಸಂಘದ ಸಹ ಕಾರ್ಯದರ್ಶಿ ನವೀದ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ವರ್ತಕ ಎನ್.ಆರ್.ಸತ್ಯನಾರಾಯಣ ಶ್ರೇಷ್ಠಿ, ಸಯ್ಯದ್ ಸಾಜೀದ್, ಸುಬ್ಬಣ್ಣ ಶೆಟ್ಟಿ, ಮೈದಿನಸಾಬ್, ಕೈಮರ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ನೂತನ ಪದಾಧಿಕಾರಿಗಳು: ಅಧ್ಯಕ್ಷ ಎಸ್.ಎಸ್.ಜಗದೀಶ್, ಗೌರವ ಅಧ್ಯಕ್ಷ ಎನ್.ಆರ್.ಸತ್ಯನಾರಾಯಣಶ್ರೇಷ್ಠಿ, ಕಾರ್ಯದರ್ಶಿ ಮಥಾಯ್, ಸಹ ಕಾರ್ಯದರ್ಶಿ ನವೀದ್ ಹುಸೇನ್, ವಿಶೇಷ ಸಲಹೆಗಾರ ಆಶೀಶ್ ಕುಮಾರ್, ಉಪಾಧ್ಯಕ್ಷ ಡಿ.ವೆಂಕಟೇಶ್ ಹಾಗೂ ಮನೋರಾಂ ಚೌದರಿ, ಖಜಾಂಚಿ ಡಿ.ವಾಸಪ್ಪ ಗೌಡ