ಕೊಡೇಕಲ್ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಆಗ್ರಹ

| Published : Jul 18 2024, 01:31 AM IST

ಕೊಡೇಕಲ್ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡೇಕಲ್ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಯನ್ನು ಅಗಲೀಕರಣಗೊಳಿಸಿ ವಿಭಜಕವನ್ನು ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಶೆಟ್ಟಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ. ಸುಶೀಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೊಡೇಕಲ್

ಕೊಡೇಕಲ್ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಯನ್ನು ಅಗಲೀಕರಣಗೊಳಿಸಿ ವಿಭಜಕವನ್ನು ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಶೆಟ್ಟಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ. ಸುಶೀಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ರಮೇಶ ಬಿರಾದಾರ್, ಹುಣಸಗಿ ತಾಲೂಕಿನಲ್ಲಿಯೇ 38 ಗ್ರಾಮಗಳನ್ನೊಗೊಂಡ ದೊಡ್ಡ ಹೋಬಳಿಯಾದ ಕೊಡೇಕಲ್ ಗ್ರಾಮಕ್ಕೆ ಪ್ರತಿನಿತ್ಯ ಸಾವಿರಾರು ಜನರು ವ್ಯಾಪಾರ-ವಹಿವಾಟು ಹಾಗೂ ಆಫೀಸ್ ಕೆಲಸದ ನಿಮಿತ್ತ ಆಗಮಿಸುತ್ತಾರೆ. ಇದರಿಂದ ರಸ್ಯೆಯ ಮುಖ್ಯ ರಸ್ಯೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಪಾದಾಚಾರಿಗಳಿಗೆ ರಸ್ತೆಯ ಪಕ್ಕ ಸಂಚರಿಸಲು ದೊಡ್ಡ ಕಿರಿಕಿರಿ ಉಂಟುಮಾಡಿದೆ ಎಂದರು.ರಸ್ತೆ ಕಿರಿದಾಗಿರುವುದರಿಂದ ರಸ್ತೆಯ ತುಂಬೆಲ್ಲಾ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ ಹಾಗೂ ಗೂಡ್ಸ್ ಸೇರಿದಂತೆ ಇತರ ವಾಹನಗಳು ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ಗ್ರಾಮದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿಯನ್ನು ಕೂಡಲೇ ಅಗಲೀಕರಣ ಮಾಡುವುದರ ಜೊತೆಗೆ ರಸ್ತೆ ವಿಭಜಕವನ್ನು ನಿರ್ಮಿಸಿ ಟ್ರಾಪಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕು. ಒಂದು ವೇಳೆ ವಿಳಂಬವಾದಲ್ಲಿ ಜಿಲ್ಲಾ ಕೇಂದ್ರದ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.ಈ ವೇಳೆ ತಾಲೂಕು ಕರವೇ ಗೌರವಾಧ್ಯಕ್ಷ ಶಿವರಾಜ ಹೋಕ್ರಾಣಿ, ಕಾರ್ಯದರ್ಶಿ ಅಮರೇಶ ನೂಲಿ, ಕೊಡೇಕಲ್ ವಲಯಾಧ್ಯಕ್ಷ ರಮೇಶ ಪೂಜಾರಿ ಹಾಗೂ ಇತರರಿದ್ದರು.