ಕೃಷಿ, ಭೂ, ವಿದ್ಯುತ್ ಖಾಸಗೀಕರಣ ಕಾಯ್ದೆ ವಾಪಸಾತಿಗೆ ಆಗ್ರಹ

| Published : Nov 20 2024, 12:31 AM IST

ಕೃಷಿ, ಭೂ, ವಿದ್ಯುತ್ ಖಾಸಗೀಕರಣ ಕಾಯ್ದೆ ವಾಪಸಾತಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ, ಭೂ ಸುಧಾರಣೆ ಹಾಗೂ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಂತೆ ರಾಜ್ಯ ಸರ್ಕಾರವೂ ವಾಪಸ್ ಪಡೆಯಬೇಕು.

ವಕ್ಫ್ ಆಸ್ತಿ ವಿಚಾರ ಬಗೆಹರಿಸಲು ಒತ್ತಾಯ । ರಾಜ್ಯ ರೈತ ಸಂಘ-ಹಸಿರು ಸೇನೆಯಿಂದ ರೈತ ಜಾಗೃತಿ ರ್‍ಯಾಲಿ

ಕನ್ನಡಪ್ರಭ ವಾರ್ತೆ ಕನಕಗಿರಿ

ಕೃಷಿ, ಭೂ ಸುಧಾರಣೆ ಹಾಗೂ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಂತೆ ರಾಜ್ಯ ಸರ್ಕಾರವೂ ವಾಪಸ್ ಪಡೆಯಬೇಕು. ರೈತರ ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ವಿಚಾರವನ್ನು ತಕ್ಷಣವೇ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಈಚೆಗೆ ಪಟ್ಟಣದಲ್ಲಿ ರೈತ ಜಾಗೃತಿ ರ್‍ಯಾಲಿ ನಡೆಸಿತು.

ಸಂಘಟನೆಯ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ ಮಾತನಾಡಿ, ಕೃಷಿ, ಭೂ ಹಾಗೂ ವಿದ್ಯುತ್ ಖಾಸಗೀಕರಣ ಕಾಯಿದೆಯನ್ನು ಕೇಂದ್ರ ಸರ್ಕಾರ ಹಿಂಪಡೆದಂತೆ ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರದ ಅಧೀನದಲ್ಲಿರುವ ವಕ್ಫ್ ಮಂಡಳಿಯು ಉಳುಮೆ ಮಾಡುವ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು ಮಾಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಇದು ರೈತರಿಗೆ ಮಾರಕ ಮತ್ತು ಮರಣ ಶಾಸನವಾಗಿದೆ. ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕರ್ನಾಟಕ ರೈತ ಸಂಘದ ಜತೆಗೆ ಸುಮಾರು 500ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲಿಸಿದ್ದು, ಮುಂದಿನ ದಿನಮಾನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರೈತ ಜಾಗೃತಿ ರ್‍ಯಾಲಿ ಹಮ್ಮಿಕೊಂಡಿದ್ದೇವೆ ಎಂದರು.

ಹೋರಾಟಗಾರ ಡಿ.ಎಸ್. ಪೂಜಾರ, ತಾಲೂಕಾಧ್ಯಕ್ಷ ಗಣೇಶರೆಡ್ಡಿ ಕೆರಿ, ದುರ್ಗಪ್ಪ ಹೆಂಗಪ್ಪನವರ್, ಗಿರೀಶ್ ದೇವರೆಡ್ಡಿ, ಉಮಾಕಾಂತ್ ದೇಸಾಯಿ, ಮಲ್ಲಪ್ಪ ಗದಗಿನ, ಹಸೆನ್ ಸಾಬ್, ಮನೂರ್ ಗೌಡ, ವೀರೇಶ ಅಳ್ಳಳ್ಳಿ, ನಿಂಗಪ್ಪ, ನಾಗರಾಜ್ ತಿಪ್ಪನಾಳ್, ಬಸವರಾಜ್ ದೇಸಾಯಿ, ಹನುಮಪ್ಪ, ರವಿಕುಮಾರ್ ಕರಡಿ ಇತರರಿದ್ದರು.