ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಲು ಕೋರಿ ಶಾಸಕರ ಕಚೇರಿ ಬಳಿ ಧರಣಿ

| Published : Feb 22 2024, 01:48 AM IST

ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಲು ಕೋರಿ ಶಾಸಕರ ಕಚೇರಿ ಬಳಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನಿಂದ ಬುಧವಾರ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸುವಂತೆ ಮುಖ್ಯಮಂತ್ರಿಯವರನ್ನು ಕೋರಿ ಶಾಸಕರ ಕಚೇರಿ ಬಳಿ ಧರಣಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನಿಂದ ಬುಧವಾರ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸುವಂತೆ ಮುಖ್ಯಮಂತ್ರಿಯವರನ್ನು ಕೋರಿ ಶಾಸಕರ ಕಚೇರಿ ಬಳಿ ಧರಣಿ ನಡೆಸಲಾಯಿತು.

2024-25ನೇ ಸಾಲಿನ ರಾಜ್ಯ ಬೆಜೆಟ್ ಮಂಡನೆಯಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾದ ಆಯವ್ಯಯ ಪತ್ರ ಮಂಡಿಸಿದ್ದಾರೆ. ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರು 6ನೇ ಗ್ಯಾರಂಟಿಯಾಗಿ ಭರವಸೆ ನೀಡಿದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ರು.15,000 ಹಾಗೂ ಸಹಾಯಕಿಯರ ಗೌರವ ಧನ ರು. 10,000 ಕ್ಕೆ ಹೆಚ್ಚಿಸುವ ಹಾಗೂ ನಿವೃತ್ತರಿಗೆ 3 ಲಕ್ಷ ಇಡುಗಂಟು ನೀಡುವ ಭರವಸೆ ಜಾರಿ ಮಾಡಿರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಆದುದರಿಂದ ದಯಮಾಡಿ ತಾವು ಮುಖ್ಯಮಂತ್ರಿಗಳ ಗಮನ ಸೆಳೆದು ನಮ್ಮಗಳ ಗೌರವಧನ ಹೆಚ್ಚಳಕ್ಕೆ ಒತ್ತಾಯಿಸ ಬೇಕೆಂದು ವಿನಂತಿಸುತ್ತೇವೆ. ಈ ವಿಚಾರವಾಗಿ ಫೆ.21 ರಂದು ಎಲ್ಲಾ ಶಾಸಕರ ಕಚೇರಿ ಬಳಿ ಧರಣಿ ನಡೆಸಿ ಈ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ದಯಮಾಡಿ ಶಾಸಕರು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸಹಕರಿಸ ಬೇಕೆಂದು ಮನವಿ ಮಾಡಿದರು. ಮನವಿ ಪತ್ರವನ್ನು ವಾಣಿ ಶ್ರೀನಿವಾಸ್ ಅವರಿಗೆ ಸಲ್ಲಿಸಲಾಯಿತು.

ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ಸವಿತ ಕೆ.ಎಸ್. ಗೌರವಾಧ್ಯಕ್ಷೆ ಯಶೋದಮ್ಮ, ಪ್ರಧಾನ ಕಾರ್ಯದರ್ಶಿ ಕಲಾ , ಕಾರ್ಯದರ್ಶಿ ಎನ್.ನಳಿನ, ಖಚಾಂಚಿ ಸರಸ್ವತಿ ಮತ್ತಿತರರು ಭಾಗವಹಿಸಿದ್ದರು. 21ಕೆಟಿಆರ್.ಕೆ.1ಃ

ತರೀಕೆರೆ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನಿಂದ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸುವಂತೆ ಮುಖ್ಯಮಂತ್ರಿಯವರನ್ನು ಕೋರಿ ಶಾಸಕರ ಕಚೇರಿ ಬಳಿ ಧರಣಿ ನೆಡೆಸಿ ಮನವಿ ಪತ್ರ ಸಲ್ಲಿಸಲಾಯಿತು.