ಕೋಲಶಿರ್ಸಿ ಸರ್ಕಾರಿ ಶಾಲೆಗೆ ಭೋಜನಾಲಯ, ತಡೆಗೋಡೆ ನಿರ್ಮಿಸಲು ಒತ್ತಾಯ

| Published : Apr 28 2025, 12:47 AM IST

ಕೋಲಶಿರ್ಸಿ ಸರ್ಕಾರಿ ಶಾಲೆಗೆ ಭೋಜನಾಲಯ, ತಡೆಗೋಡೆ ನಿರ್ಮಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದರಿಂದ ಏಳನೇ ತರಗತಿಯಲ್ಲಿ ೧೫೭ ಮಕ್ಕಳು ಕಲಿಯುತ್ತಿದ್ದಾರೆ.

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯವಶ್ಯಕವಾಗಿ ಬೇಕಾದ ಭೋಜನಾಲಯ ಹಾಗೂ ತಡೆಗೋಡೆ ನಿರ್ಮಿಸಲು ಅನುದಾನ ಒದಗಿಸಿಕೊಡುವಂತೆ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಶಾಲಾಭಿವೃದ್ಧಿ ಸಮಿತಿಯವರು ಮನವಿ ಸಲ್ಲಿಸಿದರು.

ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದರಿಂದ ಏಳನೇ ತರಗತಿಯಲ್ಲಿ ೧೫೭ ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿ ಒಂದರಿಂದ ಆರರವರೆಗೆ ಇಂಗ್ಲಿಷ್ ಮತ್ತು ಎಲ್‌ಕೆಜಿ ತರಗತಿಗಳು ನಡೆಯುತ್ತಿವೆ. ಆದರೆ ಬಿಸಿಯೂಟದ ಸಂದರ್ಭದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಭೋಜನಾಲಯದಲ್ಲಿ ಸ್ಥಳದ ಕೊರತೆ ಇರುವುದರಿಂದ ನೂತನ ಭೋಜನಾಲಯದ ಅವಶ್ಯಕತೆ ಇದೆ. ಮಕ್ಕಳ ಸಾಮೂಹಿಕ ಕಾರ್ಯಕ್ರಮ ಮಾಡುವ ಸ್ಥಳದ ಶಾಲೆಯ ಅರ್‌ಸಿಸಿ ಕಟ್ಟಡದ ಮೇಲ್ಭಾಗದಲ್ಲಿ ತಡೆಗೋಡೆ ನಿರ್ಮಾಣದ ಅಗತ್ಯವಿದೆ. ನಮ್ಮ ಅಗತ್ಯತೆಗಳನ್ನು ಮನಗಂಡು ಇವಕ್ಕೆ ಅನುದಾನವನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕೆರಿಯಾ ಆರ್. ನಾಯ್ಕ, ಸದಸ್ಯರಾದ ಅಣ್ಣಪ್ಪ ಎಚ್. ನಾಯ್ಕ, ವಾಸುದೇವ ಪಿ. ನಾಯ್ಕ, ಮುಖ್ಯೋದ್ಯಾಪಕ ಎಂ.ಕೆ. ಪಟಗಾರ, ಸ್ಥಳೀಯರಾದ ಬಾಲಕೃಷ್ಣ ನಾಯ್ಕ, ಕೆ.ಆರ್. ವಿನಾಯಕ, ಕೆ.ಆರ್. ನಾಯ್ಕ, ನಾಗರಾಜ ನಾಯ್ಕ ಮಾಳ್ಕೋಡ ಉಪಸ್ಥಿತರಿದ್ದರು.

ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿಯವರು ಭೀಮಣ್ಣ ನಾಯ್ಕರಿಗೆ ಮನವಿ ಸಲ್ಲಿಸಿದರು.