ಅರಾಭಿಕೊತ್ತನೂರಿನ ಮೇಲಿನೂರಿನಲ್ಲಿ ಸುಮಾರು ೩೫ ವರ್ಷದ ಹಿಂದೆ ನಿರ್ಮಿಸಿದ್ದ ಜಲಸಂಗ್ರಹದ ಟ್ಯಾಂಕ್ ಅನ್ನು ಕೆಡವಿ ಅದೇ ಸ್ಥಳದಲ್ಲೇ ಜಲಜೀವನ್ ಮಿಷನ್‌ನಿಂದ ಯೋಜನೆಯಡಿ ನೀರು ಸಂಗ್ರಹದ ಟ್ಯಾಂಕ್ ನಿರ್ಮಾಣ ಮಾಡಲು ಇತ್ತೀಚೆಗೆ ನಡೆದ ಗ್ರಾಪಂ ಸಭೆಯಲ್ಲಿ ನಿರ್ಣಯ ಅಂಗೀರಿಸಲಾಗಿತ್ತು. ನಿರ್ಣಯ ಉಲ್ಲಂಘಿಸಿ ಬೇರೆ ಕಡೆ ಟ್ಯಾಂಕ್ ನಿರ್ಮಾಣಕ್ಕೆ ಯತ್ನ ಆರೋಪ.
ಕನ್ನಡಪ್ರಭ ವಾರ್ತೆ ಕೋಲಾರಸಾಮಾನ್ಯ ಸಭೆಯ ನಿರ್ಣಯವನ್ನು ಗಾಳಿಗೆ ತೂರಿ ಉದ್ದಟತನ ಮೆರೆದಿರುವ ಗ್ರಾಪಂ ಅಧ್ಯಕ್ಷರು ಹಾಗೂ ಆಡಳಿತ ಬೇರೆ ಸ್ಥಳದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದೆ ಎಂದು ಆರೋಪಿಸಿ ಅರಾಭಿಕೊತ್ತನೂರಿನ ಮೇಲಿನೂರಿನ ಗ್ರಾಮಸ್ಥರು ಗ್ರಾಪಂ ಕಚೇರಿಯಿಂದ ಸಿಬ್ಬಂದಿಯನ್ನು ಹೊರಹಾಕಿ ಪ್ರತಿಭಟನೆ ನಡೆಸಿದರು.ಗ್ರಾಪಂ ಸದಸ್ಯ ಎ.ಎಸ್.ನಂಜುಂಡೇಗೌಡ, ಮುಖಂಡ ನಾರಾಯಣಶೆಟ್ಟಿ, ಮಾಜಿ ಉಪಾಧ್ಯಕ್ಷ ವೈ.ಮುನಿಯಪ್ಪ ಮಾತನಾಡಿ, ಅರಾಭಿಕೊತ್ತನೂರಿನ ಮೇಲಿನೂರಿನಲ್ಲಿ ಸುಮಾರು ೩೫ ವರ್ಷದ ಹಿಂದೆ ನಿರ್ಮಿಸಿದ್ದ ಜಲಸಂಗ್ರಹದ ಟ್ಯಾಂಕ್ ಅನ್ನು ಕೆಡವಿ ಅದೇ ಸ್ಥಳದಲ್ಲೇ ಜಲಜೀವನ್ ಮಿಷನ್‌ನಿಂದ ಯೋಜನೆಯಡಿ ನೀರು ಸಂಗ್ರಹದ ಟ್ಯಾಂಕ್ ನಿರ್ಮಾಣ ಮಾಡಲು ಇತ್ತೀಚೆಗೆ ನಡೆದ ಗ್ರಾಪಂ ಸಭೆಯಲ್ಲಿ ನಿರ್ಣಯ ಅಂಗೀರಿಸಲಾಗಿತ್ತು ಎಂದರು.ಸಭೆಯ ನಿರ್ಣಯದ ಉಲ್ಲಂಘನೆ
ಅದರೆ ಪಂಚಾಯತಿ ಆಡಳಿತ ಸಾಮಾನ್ಯ ಸಭೆಯ ನಿರ್ಣಯ ಧಿಕ್ಕರಿಸಿ, ಈಗಾಗಲೇ ೧ ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಇರುವ ಜಾಗದಲ್ಲೇ ಮತ್ತೊಂದು ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದು, ಈ ಕಾಮಗಾರಿಗೆ ಜೆಸಿಬಿಯಿಂದ ಕೆಲಸ ಆರಂಭಿಸಲು ಮುಂದಾಗಿದ್ದರಿಂದ ಗ್ರಾಮಸ್ಥರು ಪ್ರತಿಭಟನೆಗೆ ಇಳಿಯಬೇಕಾಯಿತು ಎಂದರು. ಜಿಪಂ ಅಧಿಕಾರಿಗಳ ಭರವಸೆಸ್ಥಳಕ್ಕೆ ಗ್ರಾಮೀಣ ಕುಡಿಯುವ ನೀರಿನ ಎಇಇ ಜಬೀವುಲ್ಲ ಮತ್ತು ತಾಪಂ ಸಹಾಯಕ ನಿರ್ದೇಶಕ ಅಶೋಕ್ ಆಗಮಿಸಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ಗ್ರಾಪಂ ಕೈಗೊಂಡಿರುವ ನಿರ್ಣಯದಂತೆ ಹಾಗೂ ಗ್ರಾಮಸ್ಥರ ಮನವಿಯಂತೆ ಓವರ್ ಹೆಡ್ ಟ್ಯಾಂಕ್ ಅನ್ನು ಗ್ರಾಮದ ಮೇಲಿನೂರಿನಲ್ಲಿ ಈಗಾಗಲೇ ಕೆಡವಿ ಹಾಕಿರುವ ಜಾಗದಲ್ಲೇ ನಿರ್ಮಿಸಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಡ್ರೈವರ್ ರಾಮಪ್ಪ, ತಂಭೂರಪ್ಪ, ಸೋಮಶೇಖರಗೌಡ, ಕಿಟ್ಟಪ್ಪ, ಎ.ನಾರಾಯಣಪ್ಪ, ಹೆಚ್.ನಾರಾಯಣಪ್ಪ, ಶೇಖರ್, ಎಂ.ಅನಂತ್, ಕೇಬಲ್ ನಯನ್ ಗೌಡ, ಎಸ್.ರವಿಕುಮಾರ್, ಮಹೇಂದ್ರ, ಇ.ರಾಮೇಗೌಡ, ಸುಜತಮ್ಮ ಮತ್ತಿತರರು ಇದ್ದರು.