ಸಾರಾಂಶ
ಕೆ.ಸಿ ವ್ಯಾಲಿ ನೀರು ಹರಿಯುವ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಮಳೆ ನೀರು ಕಾಲುವೆಗಳಲ್ಲಿ ಹರಿಯದೆ ಕೃಷಿ ಜಮೀನುಗಳಿಗೆ ನುಗ್ಗಿ ರೈತರಿಗೆ ಲಕ್ಷಾಂತರ ರು.ಗಳ ನಷ್ಟ ಉಂಟಾಗುತ್ತಿದೆ. ಆದರೂ ಈ ಸಮಸ್ಯೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕೋಲಾರಕೆ.ಸಿ ವ್ಯಾಲಿ ನೀರು ಹರಿಯುವ ರಾಜಕಾಲುವೆಗಳ ಒತ್ತುವರಿ ತೆರೆವುಗೊಳಿಸಲು ಹಾಗೂ ಮುಂಗಾರು ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚಿಸಬೇಕು, ಕೆ.ಸಿ ವ್ಯಾಲಿ ೩ನೇ ಹಂತದ ಶುದ್ದಿಕರಣ ಮಾಡಿ ನಷ್ಟವಾಗಿರುವ ಪ್ರತಿ ಎಕರೆ ವಾಣಿಜ್ಯ ೨ ಲಕ್ಷ ಪರಹಾರ ನೀಡಬೇಕೆಂದು ರೈತ ಸಂಘವು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಹಾಗು ಆರ್.ಐ ರಾಜೇಂದ್ರರವರಿಗೆ ಮನವಿ ನೀಡಿ ಒತ್ತಾಯಿಸಿತು. ಕೆ.ಸಿ ವ್ಯಾಲಿ ನೀರು ಹರಿಯುವ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಮಳೆ ನೀರು ಕಾಲುವೆಗಳಲ್ಲಿ ಹರಿಯದೆ ಕೃಷಿ ಜಮೀನುಗಳಿಗೆ ನುಗ್ಗಿ ರೈತರಿಗೆ ಲಕ್ಷಾಂತರ ರು.ಗಳ ನಷ್ಟ ಉಂಟಾಗುತ್ತಿದೆ. ಆದರೂ ಈ ಸಮಸ್ಯೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳಿಂದ ಹಣ ಲೂಟಿ
ಈ ಬಗ್ಗೆ ಮುಂಜಾಗ್ರತ ಕ್ರಮ ವಹಿಸದೆ ಸಮಸ್ಯೆ ಎದುರಾದಾಗ ಬರುವ ಅಧಿಕಾರಿಗಳು ಸಮಸ್ಯೆ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿ ನಂತರ ನಾಪತ್ತೆ ಆದರೆ ಮತ್ತೆ ಮುಂಗಾರು ಮಳೆ ಆರಂಭದ ಸಮಯದಲ್ಲಿ ಪ್ರತ್ಯಕ್ಷರಾಗಿ ಮತ್ತೆ ಅದೇ ಹಳೆಯ ಭರವಸೆ ನೀಡಿ ನಾಪತ್ತೆ ಆಗುತ್ತಾರೆ. ಈ ಅಧಿಕಾರಿಗಳಿಗೆ ಬಡವರ ಬದುಕಿನ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ಟೀಕಿಸಿದರು.ಸಮಸ್ಯೆ ಪರಿಹರಿಸುವ ಭರವಸೆ
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರರ ಹಾಗು ಆರ್‌ಐ ರಾಜೇಂದ್ರ ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳೆ ನಷ್ಟ ಸಮೀಕ್ಷೆ ಮಾಡುವ ಜೊತೆಗೆ ಒತ್ತುವರಿ ಆಗಿರುವ ರಾಜಕಾಲುವೆಗಳನ್ನು ತೆರೆವುಗೊಳಿಸಲು ಕ್ರಮ ವಹಿಸಿ ಶೀಘ್ರದಲ್ಲಿಯೇ ಪರಿಹಾರ ವಿತರಣೆ ಮಾಡುವ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಮಂಗಸಂದ್ರ ತಿಮ್ಮಣ್ನ, ಸುಪ್ರೀಂಚಲ ಗೀರೀಶ ವಕ್ಕಲೇರಿ ಹನುಮಯ್ಯ, ಚಂದ್ರಪ್ಪ, ಯಲ್ಲಪ್ಪ, ಆಂಜಿನಪ್ಪ, ಶೈಲಜ, ರಾಧ, ಸುಗುಣ, ಶೋಭ ಚೌಡಮ್ಮ ಇದ್ದರು.