ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ತಡೆಯಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ರಾಷ್ಟ್ರೀಯ ಸಮನ್ವಯ ಸಮಿತಿ ಹಳಿಯಾಳ ತಾಲೂಕು ಘಟಕವು ಗ್ರೇಡ್-2 ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಹಿಂದೂ ರಾಷ್ಟ್ರೀಯ ಸಮನ್ವಯ ಸಮಿತಿ ಹಳಿಯಾಳ ತಾಲೂಕು ಘಟಕ ಮನವಿ

ಕನ್ನಡಪ್ರಭ ವಾರ್ತೆ ಹಳಿಯಾಳ

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ತಡೆಯಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ರಾಷ್ಟ್ರೀಯ ಸಮನ್ವಯ ಸಮಿತಿ ಹಳಿಯಾಳ ತಾಲೂಕು ಘಟಕವು ಗ್ರೇಡ್-2 ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಹಿಂದೂ ಧರ್ಮದ ಪರಂಪರೆಯ ಪ್ರಕಾರ ಹಸುಗಳನ್ನು ಗೋಮಾತೆಯೆಂದು ಪೂಜಿಸಲಾಗುತ್ತದೆ. ಧಾರ್ಮಿಕವಾಗಿ ಗೋವುಗಳನ್ನು ದೇವತೆಯ ಸ್ವರೂಪವೆಂದು ಗೌರವಿಸಲಾಗುತ್ತದೆ. ಹೀಗಿರುವಾಗ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಗಳ ವಧೆ ನಡೆಯುವುದು ಕಂಡು ಬಂದಿದ್ದು, ಇದರಿಂದ ಸಾರ್ವಜನಿಕ ಆರೋಗ್ಯ, ಪರಿಸರ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರವು ಗೋಹತ್ಯೆ ತಡೆಯಲು ಕಾನೂನು ಜಾರಿಗೆ ತಂದಿದೆ. ಅದಾಗ್ಯೂ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.

ರಾಜ್ಯದ ಸಾಮಾಜಿಕ ಶಾಂತಿ, ಸಾರ್ವಜನಿಕ ಆರೋಗ್ಯ ಮತ್ತು ಧಾರ್ಮಿಕ ಭಾವನೆಗಳ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಅಕ್ರಮ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ನಿಯೋಗದ ಮುದಾಳತ್ವವನ್ನು ಸಮಿತಿಯ ಮುಖ್ಯಸ್ಥ ವಿಠೋಬಾ ಮಾಳ್ಸೇಕರ ವಹಿಸಿದ್ದರು. ಧರ್ಮಪ್ರೇಮಿಗಳಾದ ಗಜಾನನ ಪಾಲ್ಕರ್, ಶಿವಾನಂದ ಶೆಟ್ಟರ, ರಾಘವೇಂದ್ರ ಚಲವಾದಿ, ಅಭಿನಂದನ ಮಸೂರಕರ್, ಶಂಕರ ರೇಣಕೆ, ವಿನೋದ ಗಿಂಡೆ, ಮಂಜುನಾಥ ಘಾಡಿ, ಜಿ.ಟಿ. ಗಂಗಾಧರ್, ಎಸ್.ಎಸ್. ಗೋಕಾವಿ, ರಾಜು ವಿ., ವಿ.ಕೆ. ಸಾವಂತ್, ಆರ್.ಬಿ. ಚಲವಾದಿ, ಶಿವಾನಂದ, ಸದಾನಂದ ಬಾಳೆಕುಂದ್ರಿ ಹಾಗೂ ಇತರರು ಇದ್ದರು.