ಸಾರಾಂಶ
ಸಿದ್ದಾಪುರ: ಸಿದ್ದಾಪುರ ತಾಲೂಕಿನಿಂದ ಕುಮಟಾಕ್ಕೆ ಕರಾವಳಿ ಮತ್ತು ಮಲೆನಾಡಿನ ಸಾರಿಗೆ ಸಂಪರ್ಕಕ್ಕೆ ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿದ್ದ ನಿಲ್ಕುಂದ- ಸಂತೆಗುಳಿ ಲೋಕೋಪಯೋಗಿ ರಸ್ತೆ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಇದನ್ನು ಸರ್ವಋತು ರಸ್ತೆಯನ್ನಾಗಿ ಪರಿವರ್ತಿಸಲು ತಾಲೂಕಿನ ನಿಲ್ಕುಂದಕ್ಕೆ ಒಂದು ತಿಂಗಳೊಳಗೆ ಭೇಟಿ ನೀಡಿ ಪರಿಶೀಲಿಸುವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರವೀಂದ್ರ ನಾಯ್ಕ ನೇತೃತ್ವದಲ್ಲಿ ನಿಯೋಗ ನ. ೨೮ರಂದು ಬೆಂಗಳೂರಿನ ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಜೀರ್ಣಾವಸ್ಥೆಯಲ್ಲಿರುವ ರಸ್ತೆಯ ಛಾಯಾಚಿತ್ರದೊಂದಿಗೆ ಸರ್ವಋತು ರಸ್ತೆಯ ಕುರಿತು ಸಚಿವರಿಗೆ ಮನವರಿಕೆ ಮಾಡಿದರು.
ಕಳೆದ ೨ ದಶಕಕ್ಕಿಂತ ಮಿಕ್ಕಿ ಸಂತೆಗುಳಿ ಮಾರ್ಗವಾಗಿ ಕುಮಟಾದಿಂದ ಸಿದ್ದಾಪುರಕ್ಕೆ ೨೬ ಕಿಮೀ ರಸ್ತೆ ಸಂಪೂರ್ಣವಾಗಿ ಗಿಡಗಂಟಿ ಬೆಳೆದು ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಸ್ಥಳೀಯರ ಶ್ರಮದಾನದಿಂದ ಪ್ರಥಮ ಹಂತದಲ್ಲಿ ತಾತ್ಪೂರ್ತಿಕವಾಗಿ ಕಳೆದ ೨ ವರ್ಷದಿಂದ ಗ್ರಾಮಸ್ಥರು ರಸ್ತೆಯನ್ನು ನಿರ್ಮಿಸಿಕೊಂಡಿದ್ದರು.ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ರಾಮಸ್ಥರು ಸರ್ವಋತು ರಸ್ತೆಗಾಗಿ ಪ್ರತಿಭಟನೆ, ಪಾದಯಾತ್ರೆ ಮಾಡಲಾಗಿತ್ತು. ತಾಲೂಕಿನ ನಿಲ್ಕುಂದ, ತಂಡಾಗುಂಡಿ, ಹೆಗ್ಗರಣಿ, ಜಾನ್ಮನೆ ಹಲವು ಭಾಗದವರಿಗೆ ಕೇವಲ ೨೮ ಕಿಮೀ ಅಂತರದಲ್ಲಿ ಕುಮಟಾಕ್ಕೆ ತಲುಪಲು ಅವಕಾಶವನ್ನು ಬ್ರಿಟಿಷ್ ಕಾಲದಲ್ಲಿಯೇ ರಸ್ತೆ ನಿರ್ಮಿಸಿದ್ದು ವಿಶೇಷ. ರಸ್ತೆಯ ಅನಾನುಕೂಲದಿಂದ ಈ ಭಾಗದವರು ೫೫- ೬೦ ಕಿಮೀ ದೂರ ಪ್ರಯಾಣಿಸಿ ಕುಮಟಾಕ್ಕೆ ತಲುಪುವ ಪ್ರಯಾಸ ಪಡಬೇಕಾಗಿರುವುದರಿಂದ ಅನುದಾನ ಬಿಡುಗಡೆ ಮಾಡಬೇಕೆಂದು ಹೋರಾಟಗಾರ ರವೀಂದ್ರ ನಾಯ್ಕ ಅವರು ಸಚಿವರಿಗೆ ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಹೋರಾಟದ ಪ್ರಮುಖರಾದ ನಾಗಪತಿ ಗೌಡ ಹುಕ್ಕಳಿ, ಹರಿಹರ ನಾಯ್ಕ ಓಂಕಾರ್, ಸೀತಾರಾಮ ಗೌಡ ಹುಕ್ಕಳ್ಳಿ, ಮಂಜುನಾಥ ನಾಯ್ಕ ಹುತ್ಗಾರ್, ಮಾನವ ಬಂಧು ವೇದಿಕೆಯ ಹಿರಿಯ ಸಂಚಾಲಕ ಅನಂತ ನಾಯ್ಕ ಉಪಸ್ಥಿತರಿದ್ದರು.Demand to convert Nilkunda Santheguli road into an all season route ಸಿದ್ದಾಪುರ ಸುದ್ದಿ, ನಿಲ್ಕುಂದ ಸಂತೆಗುಳಿ ರಸ್ತೆ, ರವೀಂದ್ರ ನಾಯ್ಕ, Siddapur News, Nilkunda Santeguli Road, Ravindra Naik ರವೀಂದ್ರ ನಾಯ್ಕ ನೇತೃತ್ವದಲ್ಲಿ ನಿಯೋಗ ನ. ೨೮ರಂದು ಬೆಂಗಳೂರಿನ ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಜೀರ್ಣಾವಸ್ಥೆಯಲ್ಲಿರುವ ರಸ್ತೆಯ ಛಾಯಾಚಿತ್ರದೊಂದಿಗೆ ಸರ್ವಋತು ರಸ್ತೆಯ ಕುರಿತು ಲೋಕೋಪಯೋಗಿ ಸಚಿವರಿಗೆ ಮನವರಿಕೆ ಮಾಡಿದರು.