ಧಾರವಾಡ ಜಿಲ್ಲೆ ಆರ್ಥಿಕ ಬರ ಜಿಲ್ಲೆ ಘೋಷಣೆಗೆ ಆಗ್ರಹ

| Published : Jan 30 2024, 02:02 AM IST

ಸಾರಾಂಶ

ಜಿಲ್ಲೆಯನ್ನು ಸಮೀಕ್ಷೆ ಮಾಡಿ ಆರ್ಥಿಕ ಬರ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಧಾರವಾಡ: ಜಿಲ್ಲೆಯನ್ನು ಸಮೀಕ್ಷೆ ಮಾಡಿ ಆರ್ಥಿಕ ಬರ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೂತನ ಜಿಲ್ಲಾಧಿಕಾರಿ ದಿವ್ಯಪ್ರಭು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲೆಯು ಬರಗಾಲದಿಂದ ತತ್ತರಿಸಿದ್ದು, ಮುಂಗಾರು ಮತ್ತು ಹಿಂಗಾರು ಬೆಳೆಗಳು ಕೈಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಸಂಕಷ್ಟ ಒದಗಿದೆ. ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆ ವಿಫಲವಾಗಿದ್ದರಿಂದ ರೈತರ ಆತ್ಮಹತ್ಯೆಗಳು ಅಧಿಕವಾಗಿದೆ. ರೈತ ಕುಟುಂಬಗಳು ಬೀದಿಪಾಲಾಗುತ್ತಿವೆ. ರೈತರಿಗೆ ಉದ್ಯೋಗ ಸೃಷ್ಟಿಸಲು ಜಿಲ್ಲಾಡಳಿತ ವಿಫಲವಾಗಿದೆ. ಹಸಿರು ಬರಗಾಲದಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೈತರ ಆದಾಯ ಶೂನ್ಯವಾಗಿದೆ. ರೈತರು ಉದ್ಯೋಗವನ್ನು ಆರಿಸಿಕೊಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುವಂತಹ ಸ್ಥಿತಿ ಜಿಲ್ಲೆಯ ರೈತರಿಗೆ ಬಂದೊದಗಿದೆ.

ಸಂಘಟನೆಯ ಉಪಾಧ್ಯಕ್ಷ ನಿಂಗಪ್ಪ ದಿವಟಗಿ, ಜಿಲ್ಲಾಧ್ಯಕ್ಷ ರವಿರಾಜ ಕಂಬಳಿ, ಸಿದ್ದರಾಮಯ್ಯ ಮರಸಂಗಯ್ಯನವರ, ಚನ್ನಮ್ಮ ಕೊಟಬಾಗಿ, ಗಂಗಮ್ಮ ಹೆಬ್ಬಳ್ಳಿ, ಭಾಷಾ ಸಾಹೇಬ ಅನ್ಸಾರಿ ಇದ್ದರು.