ಹಳಿಯಾಳ ತಾಲೂಕು ಕೃಷಿ ಕ್ಷೇತ್ರ ಮಳೆಯಿಲ್ಲದೆ ಕಡಿಮೆ ಮಳೆಯಾಗಿ ವಿಶೇಷವಾಗಿ ತೆನೆ ಬಿಡುವ ಸಂದರ್ಭದಲ್ಲಿ ಗೋವಿನಜೋಳ, ಭತ್ತ ಹಾಗೂ ಇತರೆ ಬೆಳೆಗಳು ಕಬ್ಬಿನ ಬೆಳೆ ಕೂಡ ಕುಂಠಿತವಾಗಿದೆ. ಒಟ್ಟಾರೆ ಅಸಮರ್ಪಕ ಮಳೆಯಿಂದಾಗಿ ಪೂರ್ಣ ಕ್ಷೇತ್ರದ ಬೆಳೆಗಳು ನಾಶವಾಗಿವೆ.
ಹಳಿಯಾಳ: ಪ್ರಸಕ್ತ ಕೃಷಿ ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆಯಾಗದೇ ಇರುವುದರಿಂದ ಹಳಿಯಾಳ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಎನ್ಡಿಆರ್‌ಎಫ್ ಮತ್ತು ಎಸ್ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ಕಾರ್ಯವನ್ನು ಹಮ್ಮಿಕೊಳ್ಳಬೇಕೆಂದು ತಾಲೂಕು ಸಹಕಾರಿ ಸಂಘಗಳ ಮಹಾಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘವು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಶನಿವಾರ ತಾಲೂಕು ಸಹಕಾರಿ ಸಂಘಗಳ ಮಹಾಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಪ್ರಮುಖರ ನಿಯೋಗವು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆಯವರ ಗೃಹಕಚೇರಿಗೆ ತೆರಳಿ ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಸಲ್ಲಿಸಿತು.ಮನವಿಯಲ್ಲಿ ತಾಲೂಕು ಕೃಷಿ ಕ್ಷೇತ್ರ ಮಳೆಯಿಲ್ಲದೆ ಕಡಿಮೆ ಮಳೆಯಾಗಿ ವಿಶೇಷವಾಗಿ ತೆನೆ ಬಿಡುವ ಸಂದರ್ಭದಲ್ಲಿ ಗೋವಿನಜೋಳ, ಭತ್ತ ಹಾಗೂ ಇತರೆ ಬೆಳೆಗಳು ಕಬ್ಬಿನ ಬೆಳೆ ಕೂಡ ಕುಂಠಿತವಾಗಿದೆ. ಒಟ್ಟಾರೆ ಅಸಮರ್ಪಕ ಮಳೆಯಿಂದಾಗಿ ಪೂರ್ಣ ಕ್ಷೇತ್ರದ ಬೆಳೆಗಳು ನಾಶವಾಗಿದ್ದು, ಈ ಬೆಳೆಗಳ ಹಾನಿಯನ್ನು ತುಂಬಿಕೊಡುವುದರ ಜತೆಗೆ ಮುಂದಿನ ಹಿಂಗಾರು ಬೆಳೆಗಳನ್ನು ಬೆಳೆಯಲು ಸಂಬಂಧಪಟ್ಟ ಅನುಕೂಲತೆಗಳನ್ನು ಮಾಡಿಕೊಟ್ಟಲ್ಲಿ ಜನರಿಗೆ ಕನಿಷ್ಠ ಗಂಜಿ ಕುಡಿಯಲು ಅನುಕೂಲವಾಗುವುದು. ಇಲ್ಲದಿದ್ದರೆ ರೈತರ ಜೀವನ ಬಹಳಷ್ಟು ಕಷ್ಟಮಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಂಕರ ಕಾಜಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಸಹಕಾರಿ ಸಂಘಗಳ ಪ್ರಮುಖರು ಭಾಗವಹಿಸಿದ್ದರು. ಜನರಲ್ ಸರ್ಜನ್ ಆಗಿ ಡಾ. ರಾಘವೇಂದ್ರ ನೇಮಕಹೊನ್ನಾವರ: ಕಳೆದ ಮೂರು ವರ್ಷಗಳಿಂದ ತಾಲೂಕು ಆಸ್ಪತ್ರೆಯಲ್ಲಿ ಖಾಲಿಯಿದ್ದ ಜನರಲ್ ಸರ್ಜನ್ ಹುದ್ದೆಗೆ ಡಾ. ರಾಘವೇಂದ್ರ ಕೆ. ನೇಮಕವಾಗಿದ್ದಾರೆ.ಮೂಲತಃ ಶಿವಮೋಗ್ಗ ಜಿಲ್ಲೆಯ ಹೊಸನಗರದ ಡಾ. ರಾಘವೇಂಧ್ರ ಕೆ. ಅವರು ಸರ್ಜರಿ ವಿಭಾಗದಲ್ಲಿ ಸ್ನಾತಕೋತರ ಪದವಿ ಪಡೆದಿದ್ದು, ಎಂಡೋಸ್ಕೋಪಿಕ್ ಮತ್ತು ಲ್ಯಾಪ್ರೋಸ್ಕೋಪಿಕ್ ಪರಿಣಿತಿ ಪಡೆದ್ದಾರೆ. ಕಳೆದ ಐದು ವರ್ಷಗಳಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದು, ವರ್ಗಾವಣೆಗೊಂಡು ತಾಲೂಕು ಆಸ್ಪತ್ರೆಯಲ್ಲಿ ಸೇವೆಗೆ ಸೇರಿದ್ದಾರೆ ಎಂದು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ತಿಳಿಸಿದ್ದಾರೆ.