ಗದಗ: ಅಕ್ರಮ ಬಾಂಗ್ಲಾ ವಲಸಿಗರು ಕರ್ನಾಟಕದಲ್ಲಿ ನೆಲೆಸಿದ್ದಾರೆ. ಆಧಾರ್ ಕಾರ್ಡ್, ಮತದಾರರ ಚೀಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇದು ರಾಜ್ಯ ಸರ್ಕಾರದ ವೈಫಲ್ಯವಾಗಿದ್ದು, ಕೂಡಲೇ ಅವರನ್ನು ಹೊರಗಡೆ ಕಳಿಸಬೇಕು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಸುಮಾರು 20 ಲಕ್ಷಕ್ಕೂ ಬಾಂಗ್ಲಾ ವಲಸಿಗರು ನೆಲಿಸಿರುವ ಮಾಹಿತಿ ಇದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಮಲೆನಾಡು ಪ್ರದೇಶ, ದಕ್ಷಿಣ ಕರ್ನಾಟಕದ ಬಹು ಭಾಗಗಳಲ್ಲಿ ವಾಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳವೇ ಇವರಿಗೆ ಭಾರತಕ್ಕೆ ನುಸುಳಲು ಹೆಬ್ಬಾಗಿಲಾಗಿದೆ ಎಂದರು. ಬಾಂಗ್ಲಾ ವಲಸಿಗರು ಭಾರತೀಯರಾಗಿ ಬ್ಯಾಂಕ್ ಸಾಲ ಹಾಗೂ ಖಾಸಗಿ ಬ್ಯಾಂಕುಗಳು ಸಾಲ ಕೂಡ ಪಡೆದಿದ್ದಾರೆ. ಬಾಂಗ್ಲಾ ದೇಶದವರು ಕ್ರೈಂ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಸ್ಥಳೀಯರ ಬೆಂಬಲದಿಂದ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾರೆ. ಇಲ್ಲಿನ ಚಲನವಲನ, ಬಿಗಿ ಭದ್ರತೆ, ಗುಪ್ತಚರ ಮಾಹಿತಿ ಸಂಗ್ರಹಿಸಿ ಶಂಕಿತ ಉಗ್ರರಿಗೆ ಸ್ಥಳಿಯ ಮಾಹಿತಿ ರವಾನೆ ನೀಡಿರುವ ಮಾಹಿತಿ ಕೂಡ ಬೆಳಕಿಗೆ ಬಂದಿದೆ. ದರೋಡೆ ಸೂಲಿಗೆ ಮಾಡಿದ ಹಣ ಜೆಎಂಬಿ ಉಗ್ರ ಸಂಘಟನೆಗೆ, ಬಾಂಗ್ಲಾಕ್ಕೆ ರವಾನೆ ಮಾಡಿದ ಅನುಮಾನ ಇದೆ ಎಂದರು.ಈ ವೇಳೆ ಕದಂಬ ಸೈನ್ಯಯ ಪದಾಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು ಇದ್ದರು.ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ರಾಹುಲ್ ಆಯ್ಕೆ

ಗದಗ: ನಗರದ ವಸಂತ ಪ. ಸಿದ್ದಮ್ಮನಹಳ್ಳಿ ಅವರ ಮಗನಾದ ಕುಸ್ತಿಪಟು ರಾಹುಲ್ ಸಿದ್ದಮ್ಮನಹಳ್ಳಿ ಅವರು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.ಫೆ. 6ರಿಂದ 8ರ ವರೆಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ 110 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ರಾಹುಲ್ ಸಿದ್ದಮ್ಮನಹಳ್ಳಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ಫೆ. 15ರಂದು ನವದೆಹಲಿಯಲ್ಲಿ ನಡೆಯಲ್ಲಿರುವ ಖೇಲೋ ಇಂಡಿಯಾ ಕುಸ್ತಿ ಪಂದ್ಯಾವಳಿಗೆ ಪರಿಶಿಷ್ಟ ಪಂಗಡದ ಕೋಟಾದಲ್ಲಿ ರಾಹುಲ್ ಸಿದ್ದಮ್ಮನಹಳ್ಳಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕುಸ್ತಿ ತರಬೇತಿದಾರ ಡಾ. ವಿನೋದಕುಮಾರ ಇದ್ದರು.11ಜಿಡಿಜಿ12