ಸಾರಾಂಶ
ಪಾವಗಡ: ಗ್ರಾಮೀಣ ಪತ್ರಕರ್ತರಿಗೂ ಮಾಧ್ಯಮ ಸಂಜೀವಿನಿ ಯೋಜನೆ ವಿಸ್ತರಿಸುವಂತೆ ಹಾಗೂ ಇತರೆ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ 21ರಂದು ಸಮಾರಂಭದ ವೇದಿಕೆಯಲ್ಲಿ ಮನವಿ ಪತ್ರ ಸಲ್ಲಿಸುವುದಾಗಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋರಸ್ ಮಾವು ಹನುಮಂತರಾಯಪ್ಪ ತಿಳಿಸಿದ್ದಾರೆ.

ಶನಿವಾರ ಸಂಜೆ 6 ಗಂಟೆಯಲ್ಲಿ ಪಟ್ಟಣದಲ್ಲಿ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾವಗಡ ಸೇರಿದಂತೆ ತಾಲೂಕಿನ ಗ್ರಾಮೀಣ ಪತ್ರಕರ್ತರ ಅನೇಕ ದಿನಗಳ ಬೇಡಿಕೆಯಾಗಿದ್ದ ಉಚಿತ ಬಸ್ ಪಾಸ್ ಅನ್ನು ಘೋಷಣೆ ಮಾಡಿ ಜಾರಿಗೆ ತಂದಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲಿದ್ದು ಇದೇ ರೀತಿ ಮಾನ್ಯತೆ ಪಡೆದ ಪತ್ರಕರ್ತರಿಗೆ ನೀಡಿರುವ ಮಾಧ್ಯಮ ಸಂಜೀವಿನಿ ಯೋಜನೆಯನ್ನು ಗ್ರಾಮೀಣ ಪತ್ರಕರ್ತರಿಗೂ ವಿಸ್ತಾರಿಸಿ ಅನುಕೂಲ ಕಲ್ಪಿಸುವಂತೆ, ಇತರೆ ಸಮಸ್ಯೆ ಕುರಿತು ಸಿಎಂಗೆ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದರು.ಈ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯಲಿರುವುದಾಗಿ ತಿಳಿಸಿದರು.ಇದೇ ವೇಳೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವಡ್ಡೆ ಶ್ರೀನಿವಾಸುಲು,ಸತ್ಯ ಲೋಕೇಶ್,ಇಮ್ರಾನ್ ಉಲ್ಲಾ,ಚಂದ್ರಪ್ಪ,ಕುಮಾರ್,ಮೈಕೆಲ್,ರಾಮಕೃಷ್ಣ ನಾಯಕ್ ಟಿವಿಅನಿಲ್‌ಕುಮಾರ್ ಹಾಗೂ ಇತರೆ ಅನೇಕ ಮಂದಿ ಸಂಘದ ಪದಾಧಿಕಾರಿಗಳಿದ್ದರು.