ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಲೆಕುಡಿಯ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಲೆಕುಡಿಯ ಸಂಘ, ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ. ಅರಣ್ಯ ಹಕ್ಕುಪತ್ರ ಫಲಾನುಭವಿಗಳಿಗೆ ಬೆಳೆ ಸಮೀಕ್ಷೆ ಹಾಗೂ ಸಹಕಾರಿ ಸಂಘಗಳ ಮೂಲಕ ಕೃಷಿ ಸಾಲ, ಬಡ್ಡಿ ಸಹಾಯಧನ ಒದಗಿಸಬೇಕು. ಆದಿವಾಸಿಗಳಿಗೆ ರಾಜ್ಯದ ಸಿವಿಲ್ ಸೇವೆಗಳಲ್ಲಿ ಶೀಘ್ರ ನೇರ ನೇಮಕಾತಿ ಕಲ್ಪಿಸಬೇಕು. ಏಳು ತಿಂಗಳಿಂದ ಸ್ಥಗಿತಗೊಂಡಿರುವ ಪೌಷ್ಟಿಕ ಆಹಾರ ಸರಬರಾಜನ್ನು ತಕ್ಷಣ ಪುನರಾರಂಭಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಮಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಲೆಕುಡಿಯ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಲೆಕುಡಿಯ ಸಂಘ, ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ. ಅರಣ್ಯ ಹಕ್ಕುಪತ್ರ ಫಲಾನುಭವಿಗಳಿಗೆ ಬೆಳೆ ಸಮೀಕ್ಷೆ ಹಾಗೂ ಸಹಕಾರಿ ಸಂಘಗಳ ಮೂಲಕ ಕೃಷಿ ಸಾಲ, ಬಡ್ಡಿ ಸಹಾಯಧನ ಒದಗಿಸಬೇಕು. ಆದಿವಾಸಿಗಳಿಗೆ ರಾಜ್ಯದ ಸಿವಿಲ್ ಸೇವೆಗಳಲ್ಲಿ ಶೀಘ್ರ ನೇರ ನೇಮಕಾತಿ ಕಲ್ಪಿಸಬೇಕು. ಏಳು ತಿಂಗಳಿಂದ ಸ್ಥಗಿತಗೊಂಡಿರುವ ಪೌಷ್ಟಿಕ ಆಹಾರ ಸರಬರಾಜನ್ನು ತಕ್ಷಣ ಪುನರಾರಂಭಿಸಬೇಕು ಎಂದು ಸಂಘ ಒತ್ತಾಯಿಸಿದೆ. ಮುಖ್ಯಮಂತ್ರಿ ಆದಿವಾಸಿ ಗೃಹ ಭಾಗ್ಯ ಯೋಜನೆಯಡಿ ಭೂ ದಾಖಲೆ ಹಾಗೂ ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಜಿಪಿಎಸ್ ಪರಿಶೀಲನೆ ಬದಲು ಭೌತಿಕ ಸ್ಥಳ ಪರಿಶೀಲನೆ ಆಧಾರದಲ್ಲಿ ಮನೆ ಮಂಜೂರು ಮಾಡುವಂತೆ ಮಾನದಂಡಗಳನ್ನು ಸಡಿಲಿಸಬೇಕು ಎಂದು ಸಂಘದ ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಆಗ್ರಹಿಸಿದ್ದಾರೆ.
