ರಾಜೇಂದ್ರ ಭದ್ರನ್ನವರಗೆ ಕೆಎಚ್‌ಡಿಸಿ ಅಧ್ಯಕ್ಷ ಹುದ್ದೆ ನೀಡಲು ಆಗ್ರಹ

| Published : Jan 18 2024, 02:01 AM IST

ರಾಜೇಂದ್ರ ಭದ್ರನ್ನವರಗೆ ಕೆಎಚ್‌ಡಿಸಿ ಅಧ್ಯಕ್ಷ ಹುದ್ದೆ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ: ರಾಜ್ಯ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಕೆಎಚ್‌ಡಿಸಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಕಾರ ಅನುಭವಿ ವ್ಯಕ್ತಿಯಾಗಿರುವ ರಾಜೇಂದ್ರ ಭದ್ರನ್ನವರರನ್ನೇ ನೇಮಕ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒಕ್ಕೊರಲಿನ ಒತ್ತಾಯಿಸಿದರು. ತೇರದಾಳದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಹಾಗೂ ನೇಕಾರ ಮುಖಂಡರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಡ್ಡಿಮನಿ ಮಾತನಾಡಿ, ನೇಕಾರ ಸಮುದಾಯದ ರಾಜೇಂದ್ರ ಅವರು ಪಕ್ಷದ ಸಂಘಟನೆಯಲ್ಲಿ ಅಹರ್ನಿಶಿ ಶ್ರಮಿಸಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಅವರಿಗೆ ನೇಕಾರಿಕೆ ಉದ್ಯೋಗದ ಆಳಗಲದ ಪರಿಚಯವಿದೆ. ಹೀಗಾಗಿ ಅವರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಕೆಎಚ್‌ಡಿಸಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಕಾರ ಅನುಭವಿ ವ್ಯಕ್ತಿಯಾಗಿರುವ ರಾಜೇಂದ್ರ ಭದ್ರನ್ನವರರನ್ನೇ ನೇಮಕ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒಕ್ಕೊರಲಿನ ಒತ್ತಾಯಿಸಿದರು.

ತೇರದಾಳದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಹಾಗೂ ನೇಕಾರ ಮುಖಂಡರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಡ್ಡಿಮನಿ ಮಾತನಾಡಿ, ನೇಕಾರ ಸಮುದಾಯದ ಅಂದಿನ ಧುರೀಣ ಮಹಾದೇವಪ್ಪ ಭದ್ರನ್ನವರ ತಮಗೆ ಸಿಕ್ಕಿದ್ದ ಬಿ ಫಾರಂನ್ನು ವರಿಷ್ಠರ ಸೂಚನೆ ಮೇರೆಗೆ ತ್ಯಾಗ ಮಾಡಿ ವಿ.ವಿ. ಪತ್ತಾರ ಕೊಟ್ಟು ಅವರ ಗೆಲುವಿಗೆ ಶ್ರಮಿಸಿದ್ದರು. ಈಗ ರಾಜೇಂದ್ರ ಅವರು ಪಕ್ಷದ ಸಂಘಟನೆಯಲ್ಲಿ ಅಹರ್ನಿಶಿ ಶ್ರಮಿಸಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಅವರಿಗೆ ನೇಕಾರಿಕೆ ಉದ್ಯೋಗದ ಆಳಗಲದ ಪರಿಚಯವಿದೆ. ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಉದ್ಯಮ ಉಳಿವಿಗೆ ಕೈಗೊಳ್ಳಬೇಕಾದ ಕ್ರಮಗಳ ಸಂಪೂರ್ಣ ಜ್ಞಾನವಿದೆ. ಅಳಿವಿನಂಚಿಲ್ಲಿನ ನೇಕಾರಿಕೆ ಉಳಿವಿಗೆ ನೇಕಾರರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿದಲ್ಲಿ ನೇಕಾರಿಕೆಗೆ ಜೀವ ತುಂಬಲು ಸಾಧ್ಯವಾಗುತ್ತದೆ. ಮೂರು ತಲೆಮಾರುಗಳಿಂದ ಪಕ್ಷದ ಏಳ್ಗೆಗೆ ಶ್ರಮಿಸಿದ ಅರ್ಹ ವ್ಯಕ್ತಿಗೆ ನ್ಯಾಯ ನೀಡಿದಂತಾಗುತ್ತದೆ, ರಾಮಪುರದ ಶ್ರೀನೀಲಕಂಠೇಶ್ವರಮಠದಲ್ಲಿ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶ್ರೀಗಳೆದುರು ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೇಕಾರ ಸಮುದಾಯದ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದ ಭರವಸೆಯೂ ಈಡೇರಿದಂತಾಗುತ್ತದೆ ಎಂದರು.

ಮುಖಂಡ ದುಂಡಪ್ಪ ಕರಿಗಾರ, ನೇಕಾರಿಕೆ ಚಟುವಟಿಕೆ ತುಂಬಾ ಹದಗೆಟ್ಟಿದ್ದು, ಅನುಭವಿದಾರರು ಅಧ್ಯಕ್ಷ ಸ್ಥಾನ ಪಡೆಯದಿರುವುದೇ ಕಾರಣವಾಗಿದೆ. ನೇಕಾರ ಸಮುದಾಯಕ್ಕೆ ಸ್ಥಾನ ಸಿಕ್ಕಲ್ಲಿ ಸಮುದಾಯ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂದರು. ಕಾಂಗ್ರೆಸ್ ಕಾರ್ಯಕರ್ತರಾದ ಬಸವರಾಜ ಗೊಡೋಡಗಿ, ನಶೀಮ್ ಮೊಕಾಶಿ, ಶಂಕರ ಕೆಸರಗೊಪ್ಪ ನೇಕಾರ ಮುಖಂಡ ರಾಜೇಂದ್ರ ಭದ್ರನ್ನವರರನ್ನು ನೇಮಕ ಮಾಡುವಂತೆ ಸರ್ವ ಕಾರ್ಯಕರ್ತರ ಪರವಾಗಿ ಸರ್ಕಾರವನ್ನು ಒತ್ತಾಯಿಸಿದರು.

ಹಾರೂನ್ ರಶೀದ್ ಬೇವೂರ, ಓಂಪ್ರಕಾಶ ಮನಗೂಳಿ, ರಾಜು ಶಾಸ್ತಿçಗೊಲ್ಲರ, ಕಿರಣ ಕರಲಟ್ಟಿ, ಬಸವರಾಜ ಬೀಳಗಿ, ಶಾನೂರ ಮಾಲದಾರ, ಶೆಟ್ಟೆಪ್ಪ ಕಾಮಶೆಟ್ಟಿ, ಮಹಾಲಿಂಗ ಮುಧೋಳ ಉಪಸ್ಥಿತರಿದ್ದರು.