ಸಾರಾಂಶ
ಧರ್ಮಸ್ಥಳ ಮಾದರಿಯಲ್ಲಿ ಗಣಪತಿ ಆಸ್ಥಾನ ಮಂಟಪವನ್ನು ಸಿದ್ಧ ಪಡಿಸಿರುವ ಕಲಾವಿದ ಸಿ. ಎಂ. ರವೀಂದ್ರರವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತೆ ಒತ್ತಾಯ ಮಾಡಿದ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಾಳೇನಹಳ್ಳಿ ಆನಂದ ಕುಮಾರ್ ಸರ್ಕಾರಕ್ಕೆ ಒತ್ತಾಯ ಮಾಡಿದರು. ಪಟ್ಟಣದ ಹಿರಿಯ ಕಲಾವಿದರಾದ ಸಿ ಎಂ ರವೀಂದ್ರರ ಕೈಚಳಕದಿಂದ ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪವನ್ನು ಧರ್ಮಸ್ಥಳ ಮಾದರಿಯಲ್ಲಿ ಗಣೇಶನನ್ನು ಅಲಂಕಾರ ಮಾಡಿರುವುದು ಸಾರ್ವಜನಿಕರಿಂದ ತುಂಬಾ ಪ್ರಶಂಸೆಗೆ ಕಾರಣವಾಗಿದೆ.ಇಂತಹ ನುರಿತ ಕಲಾವಿದರನ್ನು ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯ ಮಾಡಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಧರ್ಮಸ್ಥಳ ಮಾದರಿಯಲ್ಲಿ ಗಣಪತಿ ಆಸ್ಥಾನ ಮಂಟಪವನ್ನು ಸಿದ್ಧ ಪಡಿಸಿರುವ ಕಲಾವಿದ ಸಿ. ಎಂ. ರವೀಂದ್ರರವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತೆ ಒತ್ತಾಯ ಮಾಡಿದ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಾಳೇನಹಳ್ಳಿ ಆನಂದ ಕುಮಾರ್ ಸರ್ಕಾರಕ್ಕೆ ಒತ್ತಾಯ ಮಾಡಿದರು.ಪಟ್ಟಣದ ಹಿರಿಯ ಕಲಾವಿದರಾದ ಸಿ ಎಂ ರವೀಂದ್ರರ ಕೈಚಳಕದಿಂದ ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪವನ್ನು ಧರ್ಮಸ್ಥಳ ಮಾದರಿಯಲ್ಲಿ ಗಣೇಶನನ್ನು ಅಲಂಕಾರ ಮಾಡಿರುವುದು ಸಾರ್ವಜನಿಕರಿಂದ ತುಂಬಾ ಪ್ರಶಂಸೆಗೆ ಕಾರಣವಾಗಿದೆ.ಇಂತಹ ನುರಿತ ಕಲಾವಿದರನ್ನು ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯ ಮಾಡಿದರು.ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ಕಲಾವಿದ ಸಿ ಎಂ ರವೀಂದ್ರರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಸಿಎನ್ ಅಶೋಕ್, ಪದಾಧಿಕಾರಿಗಳಾದ ಮಹದೇವ್, ಅರ್ಚಕರಾದ ಬಾಲಕೃಷ್ಣ ಭಟ್ ಸೇರಿದಂತೆ ಇತರರು ಹಾಜರಿದ್ದರು.